ದಾವಣಗೆರೆ;- ನನ್ನ ರಕ್ತದ ಪ್ರತಿ ಕಣದಲ್ಲೂ ಹಿಂದುತ್ವವಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಹಾದಿಯಲ್ಲಿ ಬೀದಿಯಲ್ಲಿ ಹೋಗುವವರಿಗೆಲ್ಲಾ ನಾನೇಕೆ ಉತ್ತರ ಕೊಡಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿರುದ್ಧ ವಾಗ್ಧಾಳಿ ಮುಂದುವರಿಸಿದರು.
Advertisement
ಸಂಸದ ಸಿದ್ದೇಶ್ವರರ ಬಗ್ಗೆ ನನಗೆ ಗೌರವವಿದೆ. ಸಂಸದರಿಗಿಂತಲೂ ಬಿಜೆಪಿಯಲ್ಲಿ ನಾನು ಹಿರಿಯನಿದ್ದೇನೆ. ಸಂಸದರು ವಯಸ್ಸಿನಲ್ಲಿ ಹಿರಿಯರಾಗಿರಬಹುದು. ಆದರೆ, ಪಕ್ಷದಲ್ಲಿ ನಾನು ದಾವಣಗೆರೆ ಸಂಸದರಿಗಿಂತ ಸೀನಿಯರ್ ಇದ್ದೀನಿ ಎಂದರು.
ಬಿಜೆಪಿಗಾಗಿ ಎರಡು ಸಲ ಜೈಲಿಗೆ ಹೋಗಿ ಬಂದವನು ನಾನು, ನನ್ನ ರಕ್ತದ ಪ್ರತಿ ಕಣದಲ್ಲಿಯೂ ಹಿಂದುತ್ವ ಇದೆ. ರೇಣುಕಾಚಾರ್ಯ ಏನೇ ಮಾತನಾಡಿದರು, ಏನೇ ಒಂದು ಮಾತು ಹೇಳಿದರೂ ಅದು ಪಕ್ಷ ದ್ರೋಹವೆನ್ನುತ್ತಾರೆ. ಆದರೆ, ಬೇರೆ ಕೆಲವರು ಮಾತನಾಡಿದರೆ ಅದು ಪಕ್ಷ ದ್ರೋಹವಲ್ಲ ಎಂದು ರೇಣುಕಾಚಾರ್ಯ ಹೇಳಿದರು.