ಮೈಸೂರು: ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಹಣೆಗೆ ಸಂಸದ ಸುನೀಲ್ ಬೋಸ್ ಕುಂಕುಮ ಇಟ್ಟ ಫೋಟೋ ಈಗ ವೈರಲ್ ಆಗಿದೆ. ಚಾಮುಂಡೇಶ್ವರಿ ತಾಯಿ ಗರ್ಭಗುಡಿಯಲ್ಲೇ ಈ ಘಟನೆ ನಡೆದಿದೆ. ಪ್ರವಾಸೋಧ್ಯಮ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಹಣೆಗೆ ಚಾಮರಾಜನಗರ ಸಂಸದ ಸುನೀಲ್ ಬೋಸ್ ಕುಂಕುಮ ಇಟ್ಟದ್ದು ಒಂದು ರೀತಿ ವಿವಾದವೂ ಆಗಿದೆ.
ಆಶಾಢ ಮಾಸದ ಮೂರನೇ ಶುಕ್ರವಾರದ ಮರು ದಿನ ಅಂದರೆ ಶನಿವಾರ ವರ್ಧಂತಿ ಉತ್ಸವದ ವೇಳೆ ಚಾಮುಂಡಿ ಬೆಟ್ಟಕ್ಕೆ ಜೊತೆಯಾಗಿ ಇಬ್ಬರು ಬಂದಿದ್ದರು. ಈ ವೇಳೆ ಗರ್ಭ ಗುಡಿಯಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿದರು.ಪೂಜೆ ನೆರವೇರಿಸುವ ವೇಳೆ ಬೆಂಬಲಿಗರ ಸಮ್ಮುಖದಲ್ಲೇ ಸವಿತಾ ಹಣೆಗೆ ಸುನಿಲ್ ಬೋಸ್ ಕುಂಕುಮ ಇಟ್ಟರು.
ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಸುನೀಲ್ ಬೋಸ್ ತಮಗೆ ಮದುವೆ ಆಗಿಲ್ಲ ಎಂದು ಅಫಿಡೆವಿಟ್ ಸಲ್ಲಿಸಿದ್ದರು. ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ಚಾಮರಾಜನಗರ ಬಿಜೆಪಿ ಮುಖಂಡರು ದೂರು ನೀಡಿದ್ದರು. ಸುನೀಲ್ ಬೋಸ್, ಸವಿತಾ ಜೊತೆಯಲ್ಲಿ ಇರುವ ಪೋಟೋಗಳನ್ನು ನೀಡಿ ದೂರು ಕೊಟ್ಟಿದ್ದರು.