ಬೆಂಗಳೂರು :- MP ಟಿಕೆಟ್ ಕೊಡಿಸುವುದಾಗಿ ವಂಚನೆ ಕೇಸ್ ಗೆ ಸಂಬಂಧಿಸಿದಂತೆ ಪ್ರಹ್ಲಾದ್ ಜೋಶಿ ಸಹೋದರನಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಲೋಕಸಭಾ ಟಿಕೆಟ್ ಕೊಡಿಸಲು ಹಣ ಪಡೆದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಗೋಪಾಲ್ ಜೋಶಿಗೆ ಎಫ್ಐಆರ್ ಹಾಗೂ ನಂತರದ ಕ್ರಮಗಳಿಗೆ ಹೈಕೋರ್ಟ್ ಏಕಸದಸ್ಯ ಪೀಠದಿಂದ ತಡೆಯಾಜ್ಞೆ ನೀಡಿದೆ. ಹಣದ ವಿವಾದವೆಂಬ ಕಾರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ.
ಗೋಪಾಲ ಜೋಶಿ ಪರ ಹಿರಿಯ ವಕೀಲ ಡಿ.ಆರ್.ರವಿಶಂಕರ್ ವಾದ ಮಂಡಿಸಿದ್ದು, ಹಣವನ್ನು ಹಿಂದಿರುಗಿಸಲು ಅರ್ಜಿದಾರರು ಒಪ್ಪಿದ್ದರು. ಹಣಕಾಸಿನ ವ್ಯವಹಾರಕ್ಕೆ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಗೋಪಾಲ ಜೋಶಿಗೆ ಹೈಕೋರ್ಟ್ನಿಂದ ಮಧ್ಯಂತರ ರಿಲೀಫ್ ನೀಡಲಾಗಿದೆ.
ಘಟನೆ ಹಿನ್ನೆಲೆ:-
ಗೋಪಾಲ್ ಜೋಶಿ ವಿರುದ್ದ ಸುನೀತಾ ಚವ್ಹಾಣ್ ಎನ್ನುವವರು ದೂರು ನೀಡಿದ್ದರು. ಹೀಗಾಗಿ ಅವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಲೋಕಸಭಾ ಟಿಕೆಟ್ ಕೊಡಿಸುತ್ತೇನೆ ಎಂದು ಗೋಪಾಲ್ ಜೋಶಿ 2 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, 25 ಲಕ್ಷ ರೂ. ಪಡೆದಿದ್ದರು.
ಆದರೆ ಯಾವಾಗ ಟಿಕೆಟ್ ಸಿಗದಿದ್ದಾಗ ನಾವು ಕೊಟ್ಟ ಹಣ ವಾಪಸ್ ಕೇಳಿದ್ದು, ನೀಡಿರಲಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ದೂರು ನೀಡಿದ್ದೇವು ಎಂದು ಸುನೀತಾ ಚವ್ಹಾಣ್ ಹೇಳಿದ್ದರು.



