ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ MS ಧೋನಿ ಅವರು, ಈ ಬಾರಿಯ ಐಪಿಎಲ್ ನಲ್ಲಿ ಹೊಸ ಬ್ಯಾಟ್ ಬಳಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
2025ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಹೇಂದ್ರ ಸಿಂಗ್ ಧೋನಿ ಹೊಸ ಬ್ಯಾಟ್ ಬಳಸಲಿದ್ದು, ಈ ಬ್ಯಾಟ್ನ ತೂಕದಲ್ಲಿ ಇಳಿಕೆಯಾಗಲಿದೆ. ಸದ್ಯ ಐಪಿಎಲ್ಗಾಗಿ ರಾಂಚಿಯಲ್ಲಿ ಧೋನಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.
ಸಾಮಾನ್ಯವಾಗಿ ಧೋನಿ 1,250 ರಿಂದ 1,300 ಗ್ರಾಂ ತೂಕದ ಬ್ಯಾಟ್ನ್ನು ಉಪಯೋಗಿಸುತ್ತಿದ್ದರು. ಆದರೆ ಇದೀಗ ಅದನ್ನು ಕನಿಷ್ಠ 10-20 ಗ್ರಾಂಗೆ ಕಡಿಮೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.