MS Dhoni: IPLನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಗತ್ಯವಿಲ್ಲ: MS ಧೋನಿ

0
Spread the love

2023ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಇಂಪ್ಯಾಕ್ಟ್ ಪ್ಲೇಯರ್ ನಿಯಮವ ಇದೀಗ ಸತತ 3ನೇ ಸೀಸನ್ ನಲ್ಲೂ ಮುಂದುವರಿದಿದೆ. ಈ ನಿಮಯದಂತೆ ಎಲ್ಲಾ ತಂಡಗಳಿಗೂ 11 ಆಟಗಾರರ ಬದಲಿಗೆ 12 ಆಟಗಾರರನ್ನು ಆಡಿಸುವ ಅವಕಾಶ ಇದೆ.

Advertisement

ಅಂದರೆ ಒಬ್ಬ ಆಟಗಾರನ ಬದಲಿಗೆ ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತೊಬ್ಬ ಆಟಗಾರನನ್ನು ಆಡಿಸಬಹುದು. ಬದಲಿ ಆಟಗಾರನಾಗಿದ್ದರೆ ಆತ ಫೀಲ್ದಿಂಗ್ ಮಾತ್ರ ಮಾಡಬಹುದಾಗಿರುತ್ತದೆ. ಬೌಲಿಂಗೋ, ಬ್ಯಾಟಿಂಗೋ ಮಾಡುವಂತಿಲ್ಲ.

ಇನ್ನೂ ಈ ವಿಚಾರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರತಿಕ್ರಿಯೇ ನೀಡಿದ್ದಾರೆ. ಜಿಯೋಸ್ಟಾರ್ ಜೊತೆ ಈ ಬಗ್ಗೆ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ಐಪಿಎಲ್​ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಗತ್ಯವಿಲ್ಲ ಎಂಬುದು ನನ್ನ ಭಾವನೆ. ಏಕೆಂದರೆ ಆಟಗಾರನು ಇಡೀ ಪಂದ್ಯದಲ್ಲಿ ಭಾಗಿಯಾಗಬೇಕು. ಆದರೆ ಹೊಸ ನಿಯಮವು ಇಡೀ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ ಬಂದಾಗಲೇ ನನಗೆ ಈ ನಿಯಮದ ಅಗತ್ಯವೇ ಇಲ್ಲ ಎಂದು ಅನಿಸಿತ್ತು. ಒಂದು ರೀತಿಯಲ್ಲಿ, ಇಂತಹ ನಿಯಮ ನನ್ನಂತಹ ಹಿರಿಯ ಆಟಗಾರರಿಗೆ ಸಹಾಯ ಮಾಡುತ್ತದೆ. ಆದರೆ ನಾನು ವಿಕೆಟ್ ಕೀಪರ್. ಹೀಗಾಗಿ ನಾನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಲು ಆಗುವುದಿಲ್ಲ.

ನಾನು ಇಡೀ ಪಂದ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಬಯಸುವ ಆಟಗಾರ. ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುವ ಆಟಗಾರ ಒಂದಾದರೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾತ್ರ ಮಾಡುತ್ತಾರೆ. ಇದರಿಂದಾಗಿಯೇ ಈಗ ಹೆಚ್ಚಿನ ಪಂದ್ಯಗಳಲ್ಲಿ ಬೃಹತ್ ಸ್ಕೋರ್ ಮೂಡಿ ಬರುತ್ತಿದೆ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.

 


Spread the love

LEAVE A REPLY

Please enter your comment!
Please enter your name here