ಬೆಂಗಳೂರು: ನ್ಯಾಯಾಲಯದಲ್ಲಿ ಮುಡಾ ಕೇಸ್ ವಿಚಾರದಲ್ಲಿ ನಿಶ್ಚಿತವಾಗಿ ಗೆಲುವು ಸಿಗಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಮುಡಾ ಕೇಸ್ ವಿಚಾರದಲ್ಲಿ ನಿಶ್ಚಿತವಾಗಿ ಗೆಲುವು ಸಿಗಲಿದೆ. ಮುಡಾ ಕೇಸ್ ನಲ್ಲಿ ಏನು ಇಲ್ಲ. ಇದರಲ್ಲಿ ತಪ್ಪು ಆಗಿರೋದು ಮುಡಾದಿಂದ. ಮುಡಾ ಜಮೀನು ಪಡೆದು ಸೈಟ್ ಮಾಡಿದೆ. ಇದೊಂದು ಫಾಲ್ಸ್ ಕೇಸ್, ಕೋರ್ಟ್‌ನಲ್ಲಿ ವಜಾ ಆಗುತ್ತದೆ. ಆದಾದ ಮೇಲೆ ಬಿಜೆಪಿ ಅವರಿಗೆ ಅಪಮಾನ ಆಗುತ್ತದೆ ಎಂದಿದ್ದಾರೆ.
ಈ ಕೇಸ್‌ನಲ್ಲಿ ಗೆದ್ದು ಸಿದ್ದರಾಮಯ್ಯ ಅವರು ಮತ್ತಷ್ಟು ಬಲಿಷ್ಟರಾಗುತ್ತಾರೆ. ಕುಮಾರಸ್ವಾಮಿ, ನಿರಾಣಿ, ಜೊಲ್ಲೆ, ಎಲ್ಲರಿಗೂ ಅನುಮತಿ ಕೇಳಿದ್ದಾರೆ. ಕುಮಾರಸ್ವಾಮಿ ಮೇಲೂ ರಾಜಕೀಯವಾಗಿ ನಾವು ಅಟ್ಯಾಕ್ ಮಾಡಬೇಕು. ಸ್ವಲ್ಪ ದಿನ ಕಾಯಿರಿ. ಕೊರೊನಾ, ಪಿಎಸ್‌ಐ ಕೇಸ್ ಎಲ್ಲಾ ಹಗರಣ ಹೊರಗೆ ಬರಲಿದೆ.
ಕೋರ್ಟ್‌ನಲ್ಲಿ ಸಿದ್ದರಾಮಯ್ಯಗೆ ನ್ಯಾಯ ಸಿಕ್ಕೇ ಸಿಗುತ್ತದೆ. ಅದರಲ್ಲಿ ಅನುಮಾನ ಇಲ್ಲ. ಹೈಕಮಾಂಡ್, ನಮ್ಮ ಶಾಸಕರು, ಸಚಿವರು, ಪಕ್ಷದ ಕಾರ್ಯಕರ್ತರು, ಸಿದ್ದರಾಮಯ್ಯ ಪರ ಇದ್ದಾರೆ. ಇಡೀ ಕಾಂಗ್ರೆಸ್ ಸಿದ್ದರಾಮಯ್ಯ ಪರ ಇದೆ. ಯಾರು ಸಿಎಂ ಸ್ಥಾನಕ್ಕೆ ಟವಲ್ ಹಾಕಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಮುಂದೆಯೂ ಸಿಎಂ ಆಗಿ ಇರುತ್ತಾರೆ ಎಂದಿದ್ದಾರೆ.