ಮುಡಾ ಹಗರಣ: ಲೋಕಾಯುಕ್ತ ಎಸ್ಪಿ ವಿರುದ್ಧ ಸ್ನೇಹಮಯಿ ಕೃಷ್ಣ ದೂರು!

0
Spread the love

ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್ಪಿ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ಕೊಟ್ಟಿದ್ದಾರೆ.

Advertisement

ಸಿದ್ದರಾಮಯ್ಯ ವಿಚಾರಣೆ ಬೆನ್ನಲ್ಲೇ ಸ್ನೇಹಮಯಿ ಕೃಷ್ಣ ದೂರು ಕೊಟ್ಟಿದ್ದಾರೆ. ಲೋಕಾಯುಕ್ತ ಎಸ್‌ಪಿ ಉದೇಶ್​ ಕರ್ತವ್ಯಲೋಪವೆಸಗಿದ್ದಾರೆ ಎಚ್ಚರಿಕೆ ನೀಡಿ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.

ಎಸ್‌ಪಿ ಉದೇಶ್​ ವಿರುದ್ಧ ಲಿಖಿತ ದೂರನ್ನು ಪೋಸ್ಟ್‌ ಮೂಲಕ ಸ್ನೇಹಮಯಿ ಕಳಿಸಿದ್ದು, ಮಹಜರಿನಲ್ಲಿ ಲೋಪ, ದಾಖಲೆ ಅವರ ಬಳಿಯೇ ಇಟ್ಟುಕೊಳ್ಳಬೇಕಿತ್ತು. ಆದರೆ ಅವರ ಬಳಿ ಇಟ್ಟುಕೊಳ್ಳದೇ ಕರ್ತವ್ಯಲೋಪವೆಸಗಿದ್ದಾರೆ. ದಾಖಲೆ ಪತ್ರಕ್ಕೆ ವೈಟ್ನರ್‌ ಹಾಕಿದ ಸಂಬಂಧ ವಿಚಾರಣೆ ನಡೆಸಿಲ್ಲ. ಲೈಟ್‌ ಬಿಟ್ಟವರನ್ನು ವಿಚಾರಣೆ ಮಾಡಿಲ್ಲ, ಈ ಬಗ್ಗೆ ತನಿಖೆ ನಡೆಸಿಲ್ಲ ಎಂದಿದ್ದಾರೆ.

ಎ1 ಆರೋಪಿಯನ್ನು ಮೊದಲು ವಿಚಾರಣೆ ನಡೆಸಬೇಕಿತ್ತು. ಆದರೆ A2, A3 A4 ಆರೋಪಿಗಳನ್ನ ಮೊದಲು ವಿಚಾರಣೆ ಮಾಡಿದ್ದಾರೆ. ಸಿಬಿಐಗೆ ವಹಿಸುವಂತೆ ನಾನು ಹಾಕಿದ ಅರ್ಜಿ ಕೋರ್ಟ್​ನಲ್ಲಿ ಬರುತ್ತಿದ್ದಂತೆ ವಿಚಾರಣೆಗೆ ಕರೆದಿದ್ದಾರೆ.

ಅವರ ಅಣತಿಯಂತೆ ಸಿಎಂ ಸಿದ್ದರಾಮಯ್ಯನವರೇ 10 ಗಂಟೆಯಿಂದ 12 ಗಂಟೆಯವರೆರೆ ವಿಚಾರಣೆಗೆ ಹಾಜರಾಗುತ್ತೇನೆಂದು ಸಮಯ ನಿಗದಿ ಪಡಿಸಿ ವಿಚಾರಣೆಗೆ ಬಂದಿದ್ದಾರೆ. ಅದೇ ರೀತಿ 10 ರಿಂದ 12 ಗಂಟೆಯವರೆಗೆ ವಿಚಾರಣೆ ನಡೆಸಿ ಮುಗಿಸಿದ್ದಾರೆ.

1ನೇ ಆರೋಪಿಯನ್ನ ವಿಚಾರಣೆಗೆ ಒಳಪಡಿಸಿಸಬೇಕಾದ ಅಂಶಗಳ ಬಗ್ಗೆ ತಿಳಿಸಿರುತ್ತೇನೆ. ಆದರೆ ಕೇವಲ 1 ಗಂಟೆ‌ 45 ನಿಮಿಷದಲ್ಲಿ ವಿಚಾರಣೆ ಮುಗಿಸಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here