ಮೈಸೂರು:- ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಸಿಗುತ್ತಿದೆ. ಇದೀಗ ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ವೀರ ಯೋಧನ ಪತ್ನಿಗೆ ನಿವೇಶನ ನಿರಾಕರಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
50-50 ಅನುಪಾತದಲ್ಲಿ ಸಾವಿರಾರು ನಿವೇಶನ ಹಂಚಿದ ಅಧಿಕಾರಿ ವರ್ಗದ ನಿರ್ಧಯಿ ನಿರ್ಧಾರ ಬಯಲಾಗಿದೆ. ಪುಲ್ವಾಮಾ ದಾಳಿಯಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಯೋಧ ಎಚ್. ಗುರು ಹುತಾತ್ಮರಾಗಿದ್ದಾರೆ. 8 ವರ್ಷಗಳ ಕಾಲ ಸೇನೆಯಲ್ಲಿ ಎಚ್ ಗುರು ಸೇವೆ ಸಲ್ಲಿಸಿದ್ದರು. ಯೋಧರ ಅವಲಂಬಿತರಿಗೆ ಉಚಿತವಾಗಿ ನಿವೇಶನ ನೀಡುವಂತೆ 2020ರ ಜನವರಿಯಲ್ಲಿ ಯೋಧ ಎಚ್. ಗುರು ಪತ್ನಿ ಕಲಾವತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಮುಡಾಕ್ಕೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿಫಾರಸು ಮಾಡಿದ್ದರು. 2022ರ ಜುಲೈ 13ರಂದು ಮುಡಾ ಅಧಿಕಾರಿಗಳು ಮುಂದೆ ಪ್ರಾಧಿಕಾರದಿಂದ ನಿವೇಶನ ಹಂಚಿಕೆಗೆ ಅಧಿಸೂಚನೆ ಹೊರಡಿಸಿದಾಗ ಮತ್ತೆ ಅರ್ಜಿ ಸಲ್ಲಿಸುವಂತೆ ಹಿಂಬರಹ ಹೊರಡಿಸಿದರು. ಯೋಧನ ಪತ್ನಿಗೆ ಒಂದು ನಿವೇಶನ ನೀಡಲು ಅಧಿಕಾರಿಗಳು ಕಾನೂನು ನೆಪ ಹೇಳಿದ್ದಾರೆ. 50-50 ಅನುಪಾತದಲ್ಲಿ ಸಾವಿರಾರು ನಿವೇಶನ ನೀಡಿ ಭಾರಿ ಅಕ್ರಮ ನಡೆದಿದೆ.
ಈ ಮೂಲಕ ಮುಡಾದಲ್ಲಿ ಅಧಿಕಾರಿಗಳ ಮೇಲಾಟ ಇದರಿಂದ ಬಟಾ ಬಯಲಾಗಿದೆ.