ಬೆಂಗಳೂರು: ಪೋಕ್ಸೋ ಕೇಸ್ ಮುಚ್ಚಿಹಾಕಲು ಮುಡಾ, ವಾಲ್ಮೀಕಿ ವಿಚಾರ ತಂದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪೋಕ್ಸೋ ಕೇಸ್ ಮುಚ್ಚಿಹಾಕಲು ಮುಡಾ, ವಾಲ್ಮೀಕಿ ವಿಚಾರ ತಂದಿದ್ದಾರೆ. ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಬಗ್ಗೆ ಬಿಜೆಪಿಯವರು ಬಾಯಿಬಿಡುತ್ತಿಲ್ಲ. ಬಿಜೆಪಿಯವರ ಹಗರಣ ಆಳ, ಅಗಲ ದೊಡ್ಡದಿದೆ ಸಮಯ ಹಿಡಿಯುತ್ತೆ. 545 ಪಿಎಸ್ಐ ನೇಮಕಾತಿ ಹಗರಣದ ಪ್ರಾಥಮಿಕ ತನಿಖಾ ವರದಿ ಬಂದಿದೆ.
40 ಪರ್ಸೆಂಟ್ ಕಮಿಷನ್ ಹಗರಣದ ಬಗ್ಗೆಯೂ ದಾಖಲೆಗಳು ಸಿಕ್ಕಿವೆ. ಒಂದೊಂದೇ ಹೊರಗೆ ಬರುತ್ತಿದೆ ಎಂದರು. ಎಐಸಿಸಿ ಸತ್ಯ ಶೋಧನ ಸಮಿತಿ ಮುಂದೆ ಹಳೆ ಮೈಸೂರು ಭಾಗದ ಶಾಸಕರು ಸಚಿವರಿಂದ ಗಂಭೀರ ಒತ್ತಡ ಹಾಕಲಾಗಿದೆ. 20ಕ್ಕೂ ಹೆಚ್ಚು ಸಚಿವರ ಖಾತೆಗಳನ್ನು ಬದಲಾಯಿಸದೇ ಇದ್ದರೆ ಸಚಿವರಿಂದ ಸರ್ಕಾರಕ್ಕೆ ಪಕ್ಷಕ್ಕೆ ಪ್ರಯೋಜನವಾಗುತ್ತಿಲ್ಲ. ಹಾಲಿ ಸಚಿವರು ಕೆಲವು ಖಾತೆಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಖಾತೆಗಳ ಆಳ ಅಗಲವನ್ನೇ ಅರ್ಥ ಮಾಡಿಕೊಂಡಿಲ್ಲ ಎಂದು ಸಚಿವರು ಎಂದಿದ್ದಾರೆ.