ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ತ್ಯಾಗ-ಬಲಿದಾನಗಳ ಪ್ರತೀಕವಾದ ಮೊಹರಂ ಹಬ್ಬವನ್ನು ಇಲ್ಲಿಯ ಹಿಂದೂ-ಮುಸಲ್ಮಾನ ಭಾಂದವರು ಶೃದ್ಧಾ ಭಕ್ತಿಯಿಂದ ಆಚರಿಸಿ ಭಾವೈಕ್ಯತೆ ಮೆರೆದರು.
Advertisement
ಹಿರೇಮಸೂತಿ, ಲಾಲಶಾವಲಿ, ಬೋರೆಗಾರ, ತಾಡಪತ್ರಿ, ಬಾರಾ ಇಮಾಮ, ಗಂದೀಗೇರ ಮಸೂತಿಯಲ್ಲಿ ಕಳೆದ ಐದು ದಿನಗಳಿಂದ ಡೋಲಿ ಮತ್ತು ಪಾಂಜಾದೇವರನ್ನು ಪ್ರತಿಷ್ಠಾಪಿಸಲಾಗಿತ್ತು. ತಾಡಪತ್ರಿ ಮಸೂತಿ ಹೊರತುಪಡಿಸಿ 14 ಪಾಂಜಾ ಹಾಗೂ 2 ಡೋಲಿ ದೇವರನ್ನು ಬಜಾರ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಯುವಕರ ತಂಡವು ಜಾನಪದ ಹಾಡುಗಳೊಂದಿಗೆ ಮಾಡಿದ ಕೋಲಾಟ ನೃತ್ಯ ಗಮನ ಸೆಳೆಯಿತು.
ಹಿರೇ ಮಸೂತಿಯಿಂದ ಬಜಾರ ರಸ್ತೆಯ ಮೂಲಕ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಎಲ್ಲ ಪಾಂಜಾ ಹಾಗೂ ಡೋಲಿ ದೇವರುಗಳು ಸಂಗಮಗೊಂಡ ನಂತರ ಪಾರ್ಥನೆ ನೆರವೇರಿತು. ಸಂಜೆ ಮತ್ತೆ ಮೆರವಣಿಗೆ ಮೂಲಕ ಹೊಳೆಗೆ ಕಳಿಸಲಾಯಿತು.