ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ತಾಲೂಕಿನ ಬಾಗಳಿ ಗ್ರಾಮದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಗ್ರಾಮದ ಫಕ್ಕೀರಸ್ವಾಮಿ ದೇವಸ್ಥಾನದಲ್ಲಿ ಪೀರಲ ದೇವರನ್ನು ಪ್ರತಿಷ್ಠಾಪಸಿಲಾಗಿತ್ತು. ಪೀರಲು ದೇವರು ಪ್ರತಿಷ್ಠಾಪಿಸಿರುವ ಕಟ್ಟೆಯ ಮುಂದೆ ಅಲಾಯಿ ಕುಣಿಯಲ್ಲಿ ನಿಗಿ ನಿಗಿ ಕೆಂಡ ಹಚ್ಚಿ ಯುವಕರು ಹರಕೆ ತೀರಿಸಿದರು.
Advertisement
ಮಹಿಳೆಯರು, ಮಕ್ಕಳು ಶ್ರದ್ಧಾ-ಭಕ್ತಿಯಿಂದ ಸಕ್ಕರೆ, ಬೆಲ್ಲದ ನೈವೇದ್ಯ ಅರ್ಪಿಸಿ, ಭಾನುವಾರ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೀರಲ ಮೂರ್ತಿಗಳ ಮೆರವಣಿಗೆಯ ಮೂಲಕ ವಿಸರ್ಜನೆ ಮಾಡಲಾಯಿತು.
ಸಣ್ಣ ಹನುಮಂತಪ್ಪ, ರಾಮಣ್ಣ, ಗಂಟಿ ಮಂಜುನಾಥ, ಮುಜಾವರ್ ನಜೀರ್ ಸಾಬ್, ಖಾನ್ ಸಾಬ್, ಮುಲ್ಲಪ್ಪ, ಅಲ್ಲಾಭಕ್ಷಿ, ಶಬ್ಬೀರ್ ಸಾಬ್, ವಜೀರ್ ಸಾಬ್, ಹುಸೇನ್ ಸಾಬ್, ಇಮಾಮ್ ಸಾಬ್ ಹಾಗೂ ಇತರರಿದ್ದರು.