ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರವರ ಪ್ರಥಮ ಕಾಣಿಕೆ ‘ರುದ್ರಾಭಿಷೇಕಂ’ ಕನ್ನಡ ಮತ್ತು ತೆಲುಗು ದ್ವಿಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಚಿತ್ರೀಕರಣದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು.
ಬಿವಿಕೆ ಗ್ರೂಪ್‌ನ ಕೃಷ್ಣಪ್ಪನವರು ಕ್ಲಾಪ್ ಮಾಡಿದರೆ, ವಿಜಯಪುರದ ಬಸವಕಲ್ಯಾಣಮಠದ ಶ್ರೀ ಮಾದೇವಶ್ರೀಗಳು ಕ್ಯಾಮರಾ ಗುಂಡಿ ಒತ್ತುವ ಮೂಲಕ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ನಿರಂಜನ ಶ್ರೀಗಳು, ಸಿದ್ದಗಂಗಾಮಠದ ನಿರಂಜನ ಶ್ರೀಗಳು, ಚಲನಚಿತ್ರರಂಗದ ಗಣ್ಯರು, ನಿರ್ಮಾಪಕರು, ಕಲಾವಿದರು, ತಂತ್ರಜ್ಞರು ಪಾಲ್ಗೊಂಡು ಚಿತ್ರಕ್ಕೆ ಶುಭಕೋರಿದರು.
ದಕ್ಷಿಣ ಭಾರತದ ಹೆಸರಾಂತ ಜನಪದ ಕಲೆಯನ್ನು ಒಳಗೊಂಡಿರುವ ಪ್ರಚಲಿತವಾಗಿರುವ ಕಥೆ ಇದು. ದೇವನಹಳ್ಳಿ ಸುತ್ತಮುತ್ತ, ನಂದಿಬೆಟ್ಟ, ಸಕಲೇಶಪುರ, ಮಲ್ಪೆ ಬೀಚ್ ಮೊದಲಾದ ಕಡೆ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಕೆ.ವಸಂತ್ ಕುಮಾರ್ ತಿಳಿಸಿದರು.
ನಾಯಕ ನಟನಾಗಿ ಸನತ್, ಶ್ರೀದೇವಿ ಜೋಶಿ ನಾಯಕಿಯಾಗಿ, ಖಳನಾಯಕರುಗಳಾಗಿ ಬುಲೆಟ್‌ವಿನ್, ಮನು, ಮುಕುಂದ್, ವಿಜಯರಾಜ್ ಹಾಗೂ ವಿಶಿಷ್ಟ ಪಾತ್ರದಲ್ಲಿ ಖ್ಯಾತ ಜನಪದ ದಿಗ್ಗಜ ಗುರುರಾಜ್ ಹೊಸಕೋಟೆ ಇವರೊಂದಿಗೆ ಶಂಖನಾದ ಆಂಜಿನಪ್ಪ, ಬಿರಾದಾರ್, ಮಾಲತಿಶ್ರೀ, ಮಮತಾ, ಅಲೀಷಾ ಮೊದಲಾದವರು ಚಿತ್ರದಲ್ಲಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಮುತ್ತುರಾಜ್, ವಿ.ಮನೋಹರ್ ಸಂಗೀತ ಚಿತ್ರಕ್ಕಿದೆ. ಸುರೇಶ್ ಗುಟ್ಟಹಳ್ಳಿ ನೃತ್ಯ ಸಂಯೋಜನೆ, ಬಾಬುಖಾನ್ ಕಲಾ ನಿರ್ದೇಶನ, ಮೇಕಪ್ ರಾಜ್, ವಸ್ತಾçಲಂಕಾರ ವಿಜಯಕುಮಾರ್, ಸಂಕಲನ ಮುತ್ತುರಾಜ್ ಟಿ, ಪಿಆರ್‌ಓ ಡಾ. ಪ್ರಭು.ಗಂಜಿಹಾಳ, ಡಾ.ವೀರೇಶ್ ಹಂಡಿಗಿ, ಸಹ ನಿರ್ದೇಶನ ಕಾಳಿದಾಸ ಅವರದ್ದಿದೆ. ಕೆ.ವಸಂತ್ ಕುಮಾರ್ ಅವರು ಮೊದಲ ಸಲ ಚಿತ್ರ ನಿರ್ದೇಶನಕ್ಕಿಳಿದು ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.
ವಕೀಲರಾದ ಎನ್ ಜಯರಾಮ್, ಬಿ.ಎ. ರಮೇಶ್, ಕೆ. ವೆಂಕಟೇಶ್, ಶಿವು, ಚಿದಾನಂದಮೂರ್ತಿ ಹಾಗೂ ಅವರ ಸ್ನೇಹಿತರುಗಳು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.