ಲಕ್ನೋ:- ಲಕ್ನೋದ ಉದ್ಯಾನವನದ ಬಳಿ ನೇಣುಬಿಗಿದ ಸ್ಥಿತಿಯಲ್ಲಿ ಹೇಸರಗತ್ತೆ ಪತ್ತೆಯಾಗಿದ್ದು, ಮನುಷ್ಯರಲ್ಲಿ ಮಾನವೀಯತೆ ಸತ್ತೇ ಹೋಗಿದ್ಯಾ ಎಂಬ ಪ್ರಶ್ನೆ ಮೂಡಿದೆ.
ವಾಯುವಿಹಾರಕ್ಕೆಂದು ಬಂದವರಿಗೆ ಹೇಸರಗತ್ತೆ ನೇತಾಡುತ್ತಿರುವುದು ಕಣ್ಣಿಗೆ ಬಿದ್ದಿತ್ತು, ಇಡೀ ಪ್ರದೇಶದಲ್ಲಿ ಭೀತಿ ಆವರಿಸಿದೆ. ಲಕ್ಷ್ಮಣ್ ಪಾರ್ಕ್ ಬಳಿ ಹೇಸರಗತ್ತೆಯ ಮೃತದೇಹ ನೇತಾಡುತ್ತಿರುವುದನ್ನು ಸ್ಥಳೀಯರು ಗಮನಿಸಿ, ಪ್ರಾಣಿ ಕಲ್ಯಾಣ ಸರ್ಕಾರೇತರ ಸಂಸ್ಥೆ ಆಸ್ರಾ ದಿ ಹೆಲ್ಪಿಂಗ್ ಹ್ಯಾಂಡ್ಸ್‌ಗೆ ಮಾಹಿತಿ ನೀಡಿದರು.
ಘಟನೆ ಸಂಬಂಧ ಮಹಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



