ವಿಜಯಸಾಕ್ಷಿ ಸುದ್ದಿ, ಗದಗ: ಅಂಬೇಡ್ಕರ ಜ್ಞಾನ ಪ್ರಸಾರ ಕೇಂದ್ರ ಸಮಿತಿ ಗದಗ ಮೂಲಕ ಡಾ. ಬಾಬಾಸಾಹೇಬ ಅಂಬೇಡ್ಕರರ 69ನೇ ಮಹಾಪರಿನಿರ್ವಾಣದ ಚೈತ್ಯಭೂಮಿ (ಮುಂಬೈ-ದಾದರ) ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಗದುಗಿನಿಂದ ಅಂಬೇಡ್ಕರ ಜ್ಞಾನ ಪ್ರಸಾರ ಕೇಂದ್ರ ಸಮಿತಿ ಗದಗ ಸಂಸ್ಥಾಪಕ ಅಧ್ಯಕ್ಷರಾದ ಯಲ್ಲಪ್ಪ ಡಿ.ತೇರದಾಳ ಮತ್ತು ಮಹೇಶ ವಿ.ದಾಸರ ನೇತೃತ್ವದ ಪ್ರಯಾಣಕ್ಕೆ ಗದಗ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವೆಂಕಟೇಶ ಆರ್.ಬೇಲೂರು, ಶ್ರೀನಿವಾಸ ಕೆ.ಭಂಡಾರಿ, ದಾವಲಸಾಬ ಮುಳಗುಂದ, ಸಹದೇವ ಕೋಟಿ, ಮಂಜುನಾಥ ಎಸ್.ಬಾಗಿ, ಹನುಮಂತ ಬಂಡಿಹರ್ಲಾಪೂರು, ಮಣಿಕಂಠ ಭಂಡಾರಿ, ಮಂಜುನಾಥ ಗುರ್ಲಹೊಸೂರ, ರಾಹುಲ ತೇರದಾಳ, ರವಿತೇಜ ಎಸ್.ಭಂಡಾರಿ, ಶ್ರೀಧರ ಎಸ್.ಗುರ್ಲಹೊಸೂರ, ನಿರಂಜನ್ ಉಪಸ್ಥಿತರಿದ್ದರು.



