ಸಾರ್ವಜನಿಕರ ಅಲೆದಾಟ ತಪ್ಪಿಸಲು ನಗರಸಭೆಯಿಂದ ಫಾರ್ಮ್-3 ಮೇಳ‌

0
Spread the love

ವಿಜಯನಗರ : ಹೊಸಪೇಟೆ ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದ್ದು, ಈ ಏಜೆಂಟ್ ಗಳ ಹಾವಳಿಗೆ ಬ್ರೇಕ್ ಬೀಳೋದು ಯಾವಾಗ ಅನ್ನೋದೇ ಸಾರ್ವಜನಿಕರಿಗೆ ದೊಡ್ಡ ಪ್ರಶ್ನೆಯಾಗಿದೆ. ಆದರೆ ಇದೀಗ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Advertisement

ಫಾರಂ-03 ಪಡೆಯಲು ಮಧ್ಯವರ್ತಿಗಳ ಹಾವಳಿ ತಪ್ಪಿಸಲೆಂದು ಅಧಿಕಾರಿಗಳು ಹೊಸ ಕಾರ್ಯಕ್ರಮ ಜಾರಿ ಮಾಡುವುದಾಗಿ ಹೇಳಿದ್ದಾರೆ. ಸಾರ್ವಜನಿಕರ ಅಲೆದಾಟ ತಪ್ಪಿಸುವ ಸಲುವಾಗಿ ‘ವಾರ್ಡ್ವಾರು ಫಾರಂ-03 ಮೇಳ’ ಎಂಬ ವಿನೂತನ ಕಾರ್ಯಕ್ರಮ ಮಾಡುತ್ತೇವೆ.

ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಿ, ಹಣ ಕಳೆದುಕೊಳ್ಳದೇ, ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ಸಂಜೆಯೊಳಗೆ ದಾಖಲೆ ನೀಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮುಂದಿನ ಫೆಬ್ರವರಿ ತಿಂಗಳಿಂದಲೇ ರಜಾ ದಿನಗಳಲ್ಲಿ ಮೇಳ ಆಯೋಜನೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಫೆಬ್ರವರಿ ತಿಂಗಳು 2 ರಂದು 08-09 ರಂದು 16 ಮತ್ತು 22-23ರಂದು ನಡೆಯಲಿವೆ.

ಈ ಮೇಳದಲ್ಲಿ ಕಂದಾಯ ಅಧಿಕಾರಿ, ಬಿಲ್ ಕಲೆಕ್ಟರ್, ಪೌರಾಯುಕ್ತರು, ಎಂಜಿನಿಯರ್ ಹಾಗೂ ಬ್ಯಾಂಕ್ ಸಿಬ್ಬಂದಿ ಹಾಜರಿರುತ್ತಾರೆ. ಕಂಪ್ಯೂಟರ್ಗಳಲ್ಲಿ ದಾಖಲೆ ಪರಿಶೀಲನೆ ಮಾಡಿ ಎಲ್ಲ ದಾಖಲೆ ಸರಿ ಇದ್ದರೆ, ನವೀಕರಣ ಆದರೆ ಅರ್ಧ ಗಂಟೆ ಮತ್ತು ಹೊಸ ಫಾರಂ-03 ಮೂರ್ನಾಲ್ಕು ಗಂಟೆಯೊಳಗೆ ವಿತರಿಸಲಾಗುತ್ತದೆ. ಖಾತೆ ಬದಲಾವಣೆಗೆ ಅಲ್ಲೇ ನೋಟಿಫಿಕೇಷನ್ ಮಾಡಿಕೊಡಲಿದೆ ಅಂತಾ ನಗರಸಭೆ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here