ಸೊಳ್ಳೆಗಳ ನಿಯಂತ್ರಣಕ್ಕೆ ಪುರಸಭೆ ಕ್ರಮ

0
Municipal measures for mosquito control
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇತ್ತಿಚೇಗೆ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದ್ದು, ಡೆಂಗ್ಯೂ ಜ್ವರದ ಪ್ರಮಾಣವೂ ಏರುತ್ತಿರುವದರಿಂದ ಜನರು ಆತಂಕ್ಕೆ ಒಳಗಾಗಿದ್ದರು. ಮುಂಗಾರು ಮಳೆ ಕಡಿಮೆ ಪ್ರಮಾಣದಲ್ಲಿ ಆಗಿದ್ದರಿಂದ ಅಥವಾ ದೊಡ್ಡ ಪ್ರಮಾಣದ ಮಳೆ ಬೀಳದಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಾರದು ಎನ್ನುವ ಉದ್ದೇಶದಿಂದ ಮುಂಜಾಗೃತಾ ಕ್ರಮವಾಗಿ ಸೊಳ್ಳೆಗಳ ಸಂತತಿ ಹರಡದಂತೆ ಫಾಗಿಂಗ್ ಯಂತ್ರ ಬಳಸಿ ಔಷಧಿ ಸಿಂಪರಣೆ ಕಾರ್ಯವನ್ನು ಪುರಸಭೆ ವತಿಯಿಂದ ಕೈಗೊಂಡಿದ್ದು, ಶುಕ್ರವಾರ ಪಟ್ಟಣದ ಅನೇಕ ವಾರ್ಡ್ಗಳಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರ ನೇತೃತ್ವದಲ್ಲಿ ಫಾಗಿಂಗ್ ಕಾರ್ಯವನ್ನು ಕೈಗೊಂಡರು.

Advertisement

ಫಾಗಿಂಗ್ ಕಾರ್ಯ ನಡೆಯುತ್ತಿರುವದನ್ನು ಸ್ವತಃ ಶಾಸಕ ಡಾ.ಚಂದ್ರು ಲಮಾಣಿ ವೀಕ್ಷಿಸಿ, ವಾರ್ಡ್ನ ಅನೇಕ ಕಡೆಗಳಲ್ಲಿ ತಾವೇ ಪೌರಕಾರ್ಮಿಕರೊಂದಿಗೆ ಸಾಗಿ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಪಟ್ಟಣದಲ್ಲಿ ಸೊಳ್ಳೆಗಳ ಪ್ರಮಾಣ ಹೆಚ್ಚುತ್ತಿದ್ದು, ಜನರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಸಂಗ್ರಹವಾಗದಂತೆ ಮತ್ತು ಚರಂಡಿಗಳಲ್ಲಿ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸಬೇಕು ಎಂದ ಅವರು ಫಾಗಿಂಗ್ ಕಾರ್ಯವನ್ನು ಎಲ್ಲ ವಾರ್ಡ್ಗಳಲ್ಲಿ ಹಂತ ಹಂತವಾಗಿ ಕೈಗೊಳ್ಳಿ ಎಂದು ಸೂಚನೆ ನೀಡಿದರು.

ಮುಖ್ಯಾಧಿಕಾರಿ ಮಹೇಶ ಹಡಪದ ಮಾಹಿತಿ ನೀಡಿ, ಪಟ್ಟಣದದಲ್ಲಿ ಸೊಳ್ಳೆಗಳ ಪ್ರಮಾಣ ಹೆಚ್ಚಾಗಿದ್ದು, ಡೆಂಗ್ಯೂ ಸೇರಿದಂತೆ ನಾನಾ ರೀತಿಯ ರೋಗಳು ಹರಡಲು ಸೊಳ್ಳೆಗಳೇ ಕಾರಣ. ಅವುಗಳನ್ನು ನಿಯಂತ್ರಿಸುವ ಮತ್ತು ಸಂತತಿ ಹರಡದಂತೆ ಕ್ರಮ ಜರುಗಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಆರೋಗ್ಯ ನೀರೀಕ್ಷಕ ಮಂಜುನಾಥ ಮುದಗಲ್, ಬಸವಣ್ಣೆಪ್ಪ ನಂದೆಣ್ಣವರ ಹಾಗೂ ಪೌರಕಾರ್ಮಿಕರು ಇದ್ದರು.


Spread the love

LEAVE A REPLY

Please enter your comment!
Please enter your name here