ಗದಗ: ನಾವೇನು ಮುನಿರತ್ನ ದಲಿತ ವಿರೋಧಿ ಅಂತಾ ಹೇಳಿಲ್ಲ ಎಂದು ಗದಗನಲ್ಲಿ ಸಚಿವ ಎಚ್ ಕೆ ಪಾಟೀಲ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಾಧ್ಯಮ ಬಿತ್ತರಿಸಿದ ವಿಷಯದ ಮೇಲೆ ನಂಬಿಕೆ ಇಟ್ಟು ಅವರ ಕ್ರಮ ಸರಿಯಲ್ಲ ಅಂತಾ ಹೇಳಿದ್ದೇವೆ. ಜಾತಿ ನಿಂದನೆ ಘೋರ ಅಪರಾಧ ಅದರಲ್ಲೂ ಶಾಸಕನಾಗಿ ಹೇಳಿದ್ದು ಸರಿಯಲ್ಲ ಎಂದು ಹೇಳಿದರು.
ಕಾಂಗ್ರೆಸ್ ನವರ ಮೇಲೆ ಗೂಬೆ ಕೂಡಿಸುವುದು ಯಾತಕ್ಕೆ?ಡಿಕೆ ಸುರೇಶ ಅವರು ಹೀಗೆ ಅನ್ನಿ ಅಂತ ಅಂದಿದ್ರಾ?ಯಾವ ಕಾರಣಕ್ಕೆ ಆಪಾದನೆ ಕೊಡ್ತಿರಿ?ಇಷ್ಟೆಲ್ಲಾ ಅಂದ್ರೂ ಅರೆಸ್ಟ್ ಮಾಡದೇ ಇರುವುದು ಆಗಬೇಕಾ?ಸರ್ಕಾರ ಜನ್ರ ಪರವಾಗಿ ಇರಬೇಕಾ ಅಥವಾ ಶಾಸಕರ ಪರವಾಗಿ ಇರಬೇಕಾ?ನಾವು ಕಾನೂನಿನ ಅನ್ವಯ ಏನು ಮಾಡಬೇಕಿತ್ತು ಅದನ್ನು ಮಾಡಿದ್ದೆವೆ.ನಾವು ಮಾಡಿದ್ದು ಸರಿಯಾಗಿದೆ.
ಷಡ್ಯಂತರ ಎಂಬ ಹೆಸರಿನ ಮೇಲೆ ರಾಜಕೀಯ ಮಾಡಯವುದಕ್ಕೆ ಕೆಲವರು ಮುಂದಾಗಿದ್ದಾರೆ.ಬಿಜೆಪಿ ನವರಿಗೆ ಇದನ್ನು ಡಿಫೆಂಡ್ ಮಾಡುವುದಕ್ಕೆ ನೈತಿಕ ಶಕ್ತಿ ಇಲ್ಲ.ಜನ ಆಕ್ರೋಶ ಹೊಂದಿದ್ದಾರೆ.ಜಾತಿ ಮೇಲೆ ಹೆಣ್ಣು ಮಕ್ಕಳನ್ನು ಕರೆಯುತ್ತಿದ್ದಾರಾ?ನಾಚಿಕೆ ಬರಲಿಲ್ವಾ?ನೀವು ಶ್ರೀಮಂತರು ಇರಬಹುದು, ನೀವು ಬಲಾಢ್ಯರು ಇರಬಹುದು.ಮತ್ತೊಬ್ಬರನ್ನು ಅಗೌರವಿಸುವ ಪ್ರಜಾಪ್ರಭುತ್ವ ನಿಮಗೆ ಹಕ್ಕು ಕೊಡಲ್ಲ.
ಪ್ರಜಾಪ್ರಭುತ್ವ ಅದನ್ನು ಸಹಿಸೊದಿಲ್ಲ.ನೀವು ಹೀಗೆ ಮಾತನಾಡಿದ್ರೆ ಜನ್ರ ಆಕ್ರೋಶಕ್ಕೆ ಒಳಗಾಗುತ್ತಿರಿ.ನಾವು ಕಾನೂನಿನ ಅನ್ವಯ ಏನು ಮಾಡಬೇಕಿತ್ತು ಅದನ್ನು ಮಾಡಿದ್ದೆವೆ.ನಾವು ಮಾಡಿದ್ದು ಸರಿಯಾಗಿದೆ.ಷಡ್ಯಂತರ ಎಂಬ ಹೆಸರಿನ ಮೇಲೆ ರಾಜಕೀಯ ಮಾಡಯವುದಕ್ಕೆ ಕೆಲವರು ಮುಂದಾಗಿದ್ದಾರೆ ಎಂದು ಹೇಳಿದರು.