ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯ ಕೇಸ್ʼನಲ್ಲಿ ಎ2 ದರ್ಶನ್ ಕೂಡ ಜಾಮೀನಿಗಾಗಿ ಕಾಯುತ್ತಿದ್ದಾರೆ. ಅವರು ಕೂಡ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಂದು ಜಾಮೀನು ಅರ್ಜಿಯ ವಿಚಾರಣೆ ಕೂಡ ಮುಂದೂಡಿಕೆ ಆಗಿದೆ. ಸೆಪ್ಟೆಂಬರ್ 25ರಂದು ಪವಿತ್ರಾ ಗೌಡ ಜಾಮೀನು ಅರ್ಜಿ ಹಾಗೂ ಸೆಪ್ಟೆಂಬರ್ 27ಕ್ಕೆ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸದ್ಯಕ್ಕೆ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾರೆ.
ಇನ್ನೂ ಪತ್ನಿ ವಿಜಯಲಕ್ಷ್ಮಿಯವರು ಪತಿ ದರ್ಶನ್ರನ್ನು ಭೇಟಿಯಾಗಲು ಜೈಲಿಗೆ ಆಗಮಿಸಿದ್ದಾರೆ. ವಿಜಯಲಕ್ಷ್ಮಿ ಜೊತೆ ಸುಶಾಂತ್ ನಾಯ್ಡು, ಆಪ್ತ ಹೇಮಂತ್ ಎಂಬವರು ಆಗಮಿಸಿದ್ದಾರೆ. ಜೈಲಿನ ಭದ್ರತಾ ಪರಿಶೀಲನೆ ಕೊಠಡಿಯಲ್ಲಿ ಬ್ಯಾಗ್ ಪರಿಶೀಲನೆ ನಡೆಸಿದ ಬಳಿಕ ದರ್ಶನ್ ಅವರಿದ್ದ ಕೊಠಡಿಗೆ ಪತ್ನಿ ತೆರಳಿದರು. ವಿಜಯಲಕ್ಷ್ಮಿ ಜೊತೆ ಸುಶಾಂತ್ ನಾಯ್ಡು, ಆಪ್ತ ಹೇಮಂತ್ ಎಂಬವರು ಆಗಮಿಸಿದ್ದಾರೆ. ವಿಜಯಲಕ್ಷ್ಮಿಯವರು ಬರುವಾಗ ಎರಡು ಬ್ಯಾಗ್ ತಂದಿದ್ದಾರೆ ಎನ್ನಲಾಗಿದ್ದು, ಇದರಲ್ಲಿ ಬಟ್ಟೆ, ಬಿಸ್ಕೆಟ್ಸ್, ಡ್ರೈಫ್ರೂಟ್ಸ್ ತಂದಿರಬಹುದು ಎಂದು ಹೇಳಲಾಗಿದೆ.