ವಿಜಯನಗರ : ವಿಜಯನಗರದಲ್ಲಿ ನಸುಕಿನ ಜಾವದಲ್ಲಿ ಭೀಕರ ಕೊಲೆ ನಡೆದಿತ್ತು. ಹೊಸಪೇಟೆಯ ಭಟ್ರಳ್ಳಿ ಆಂಜನೇಯ ದೇಗುಲದ ದ್ವಾರ ಬಾಗಿಲಿನ ಬಳಿ ಘಟನೆ ನಡೆದಿದ್ದು, ಮನಸೋ ಇಚ್ಛೆ ಇರಿದು ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿತ್ತು. ಹೊಸಪೇಟೆ ನಿವಾಸಿ ರಾಮಲಿ( 40) ಕೊಲೆಯಾದ ವ್ಯಕ್ತಿಯಾಗಿದ್ದು,
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಹೊಸಪೇಟೆ ಗ್ರಾಮೀಣ ಪೊಲೀಸರು ಕೇವಲ 3 ಗಂಟೆಯಲ್ಲಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಣ್ಣಪ್ಪ( 31) ಬಂಧಿತ ಆರೋಪಿಯಾಗಿದ್ದು,
ಅಣ್ಣಪ್ಪ ಮತ್ತು ಕೊಲೆಯಾದ ರಾಮಾಲಿ ಇಬ್ಬರು ಸುಮಾರು ವರ್ಷಗಳಿಂದ ಸ್ನೇಹಿತರಾಗಿದ್ದರು. ಹಣಕಾಸಿನ ವಿಚಾರದಲ್ಲಿ ಇಬ್ಬರಿಗೂ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ವಿಜಯನಗರದಲ್ಲಿ ಜಿಲ್ಲಾ ಎಸ್ಪಿ ಡಾ.ಶ್ರೀಹರಿಬಾಬು ಹೇಳಿದ್ದಾರೆ.



