ದೊಡ್ಡಬಳ್ಳಾಪುರ: ಹಣಕ್ಕಾಗಿ ಸ್ನೇಹಿತನನ್ನೆ ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಶೆಟ್ಟಹಳ್ಳಿ ನಿವಾಸಿ ದೇವರಾಜ್ ( 62 ) ಕೊಲೆಯಾಗಿದ್ದ ದುರ್ದೈವಿಯಾಗಿದ್ದು, ಸ್ನೇಹಿತರಾದ ರಾಜ್ ಕುಮಾರ್ ಮತ್ತು ಅನಿಲ್ ಬಂಧಿತ ಆರೋಪಿಗಳಾಗಿದ್ದಾರೆ.
ಮೃತ ದೇವರಾಜ್ ಮತ್ತು ಆರೋಪಿಗಳು ರಿಯಲ್ ಎಸ್ಟೇಟ್, ಸೆಕೆಂಡ್ ಹ್ಯಾಂಡ್ ಕಾರು ಡೀಲರ್ ಆಗಿದ್ದರು. ದೇವರಾಜ್ ಜೊತೆ ಲಕ್ಷ ಲಕ್ಷ ವ್ಯವಹಾರ ಮಾಡ್ತಿದ್ದ ಆರೋಪಿ ರಾಜ್ ಕುಮಾರ್, ಹಣ ವಾಪಸ್ ಕೊಡಬೇಕಾಗುತ್ತದೆ ಅಂತ ಹಣ ನೀಡೋದಾಗಿ ಕರೆಸಿ ಸ್ನೇಹಿತನನ್ನೆ ಕೊಲೆ ಮಾಡಿದ್ದಾರೆ.
ದೇವರಾಜ್ ನನ್ನ ಕೊಲೆ ಮಾಡುವ ಮುನ್ನವೆ ಖಾಸಗಿ ಬಡಾವಣೆಯಲ್ಲಿ ಸಂಪು ಕಟ್ಟಬೇಕು ಅಂತ ಜೆಸಿಬಿ ಮೂಲಕ ಗುಂಡಿ ಹಗೆಸಿದ್ದು ದೇವರಾಜ್ ಮೃತ ದೇಹವನ್ನ ಗುಂಡಿಗೆ ಹಾಕಿ ಮಣ್ಣು ಮುಚ್ಚಿದ್ದಾರೆ.
ಜೊತೆಗೆ ಕೊಲೆ ಮಾಡಿದ ನಂತರ ಮೂರು ದಿನಗಳ ಬಳಿಕ ಕೊಲೆ ಮಾಡಿದ ದೇವರಾಜ್ ಕುಟುಂಬಸ್ಥರ ಜೊತೆಗೂಡಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೇವರಾಜ್ ಕಾಣೆಯಾಗಿರುವುದಾಗಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಪೊಲೀಸರಿಗೆ ರಾಜ್ ಕುಮಾರ್ ಮೇಲೆ ಅನುಮಾನ ಮೂಡಿದ್ದು ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ 20 ಲಕ್ಷ ಸಾಲ ನೀಡಿದ್ದ ಹಣಕ್ಕಾಗಿ ದೇವರಾಜ್ ಪದೇ ಪದೆ ಕೇಳ್ತಿದ್ದ ಕಾರಣ ಸ್ನೇಹಿತ ಅನಿಲ್ ಜೊತೆಗೂಡಿ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಅಲ್ಲದೆ ಕೊಲೆ ನಂತರ ಹೂತಿದ್ದ ಹೆಣ ಸಿಗಬಾರದು ಅಂತ ತಿಂಗಳ ಬಳಿಕ ಅದನ್ನ ತೆಗೆದು ಪೆಟ್ರೋಲ್ ಹಾಕಿ ಸುಟ್ಟಿದ್ದು ಸುಟ್ಟ ನಂತರ ಬೂದಿ ಸಮೇತ ಕೆರೆಗೆ ಹಾಕಿದ್ದಾಗಿ ಹೇಳಿದ್ದು ಕೆರೆಗೆ ಹಾಕಿದ್ದ, ಈಗ ಮೃತದೇಹದ ಮೂಳೆಗಳನ್ನ ಹೊರ ತೆಗೆದಿದ್ದು ದೃಶ್ಯಂ ಸ್ಟೈಲ್ ನಲ್ಲಿ ಕಥೆ ಕಟ್ಟಲು ಮುಂದಾಗಿದ್ದವನು ಅಂದರ್ ಆಗಿದ್ದಾರೆ.