ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಗೆ ಜಾಮೀನು ಮಂಜೂರು

0
Spread the love

ಬೆಂಗಳೂರು : ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಡಾ. ಶಿವಮೂರ್ತಿ ಶರಣರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

Advertisement

ಜಾಮೀನು‌ ಮಂಜೂರಾದ್ರೂ ಸದ್ಯಕ್ಕೆ ಅವರಿಗೆ ಬಿಡುಗಡೆ ಭಾಗ್ಯವಿಲ್ಲ. ಮೊತ್ತೊಂದು ಪೋಕ್ಸೋ ಕೇಸ್​ನಲ್ಲಿ ಜಾಮೀನು ಪಡೆಯಬೇಕಿದೆ.

2022ರ ಸೆಪ್ಟಂಬರ್ 1ರಂದು ಅಪ್ರಾಪ್ತ ಬಾಲಕಿ ಮೇಲೆ ದಾಖಲಾಗಿದ್ದ ಒಂದು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳನ್ನು ಅರೆಸ್ಟ್ ಮಾಡಲಾಗಿತ್ತು. 7 ಷರತ್ತು ವಿಧಿಸಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಷರತ್ತುಗಳನ್ನ ವಿಧಿಸಿ ಜಾಮೀನು ಮಂಜೂರು

  • ಚಿತ್ರದುರ್ಗ ಪ್ರವೇಶ ನಿರ್ಬಂಧ, ಮಠಕ್ಕೆ ತೆರಳುವಂತಿಲ್ಲ
  • ಇಬ್ಬರ ಶ್ಯೂರಿಟಿ, 2 ಬಾಂಡ್​ ನೀಡಲು ಕೋರ್ಟ್ ಸೂಚನೆ
  • ತಪ್ಪದೇ ವಿಡಿಯೋ ಕಾನ್ಫರೆನ್ಸ್​​ನಲ್ಲಿ ವಿಚಾರಣೆಗೆ ಹಾಜರಾಗಬೇಕು
  • ಹೈಕೋರ್ಟ್ ಏಕಸದಸ್ಯ ಪೀಠದಿಂದ ಷರತ್ತುಬದ್ಧ ಜಾಮೀನು
  • ಇಬ್ಬರು ಅಪ್ರಾಪ್ತರು ನೀಡಿದ್ದ ಪ್ರಕರಣದಲ್ಲಿ ಜಾಮೀನು
  • ಈ ಕೇಸ್​ನಲ್ಲಿ ಎರಡು ಪ್ರತ್ಯೇಕ ಚಾರ್ಜ್​ಶೀಟ್ ಸಲ್ಲಿಸಲಾಗಿತ್ತು
  • ಜಾಮೀನು ಅರ್ಜಿ‌ ನಿರಾಕರಿಸಿದ್ದ ಅಧೀನ ನ್ಯಾಯಾಲಯ
  • ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದ ಶಿವಮೂರ್ತಿ ಶರಣರು
  • ಜಾಮೀನು‌ ಮಂಜೂರಾದ್ರೂ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ
  • ಮೊತ್ತೊಂದು ಪೋಕ್ಸೋ ಕೇಸ್​ನಲ್ಲಿ ಪಡೆಯಬೇಕಿದೆ ಜಾಮೀನು

Spread the love

LEAVE A REPLY

Please enter your comment!
Please enter your name here