ಬೆಂಗಳೂರಿನ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆ ಎತ್ತುವ ಘಟನೆ ಒಂದಾಗಿದೆ. ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರ ಮನೆಯಲ್ಲೇ ಕಳ್ಳತನ ನಡೆದಿದ್ದು, ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಕಳ್ಳರು ಸುಲಭವಾಗಿ ಕದ್ದೊಯ್ದಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಗಳನ್ನು ರಿಕ್ಕಿ ಕೇಜ್ ಸ್ವತಃ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಇಬ್ಬರು ಯುವಕರು ಬೈಕ್‌ನಲ್ಲಿ ಬಂದು, ಮೊದಲಿಗೆ ಮನೆಯ ಸುತ್ತ ಪರಿಶೀಲನೆ ನಡೆಸಿರುವುದು ಕಂಡುಬರುತ್ತದೆ. ನಂತರ ಒಬ್ಬನು ಗೇಟ್ ಒಳಗೆ ಹೋಗಿ ಸಂಪ್ ಮುಚ್ಚಳವನ್ನು ಎತ್ತಿಕೊಂಡು ಹೊರಗೆ ಬಂದು ಬೈಕ್‌ನಲ್ಲಿ ಇಟ್ಟುಕೊಂಡು ಎಸ್ಕೇಪ್ ಆಗಿದ್ದಾನೆ.
ಕಳ್ಳತನದ ವೇಳೆ ಕೆಂಪು ಬಣ್ಣದ ಫುಡ್ ಡೆಲಿವರಿ ಬ್ಯಾಗ್ ಬೈಕ್‌ನಿಂದ ಕೆಳಗೆ ಬೀಳುವುದು ದೃಶ್ಯಗಳಲ್ಲಿ ದಾಖಲಾಗಿದ್ದು, ಇದರಿಂದ ಡೆಲಿವರಿ ಬಾಯ್ ಪಾತ್ರವಿರಬಹುದೆಂಬ ಅನುಮಾನ ಮೂಡಿದೆ. ಈ ಎಲ್ಲ ಮಾಹಿತಿಗಳೊಂದಿಗೆ ರಿಕ್ಕಿ ಕೇಜ್ ಅವರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ದಾಖಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.



