ಲಕ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದ ದುರ್ಗಾದೇವಿ ಜಾತ್ರೆಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮ ಜನಮನ ಸೆಳೆಯಿತು.
Advertisement
ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಬಸವರಾಜ ಈರಣ್ಣವರ, ಲಕ್ಕುಂಡಿಯ ಜಾನಪದ ಕಲಾವಿದೆ ಅನಸೂಯಾ ಬೂಮಣ್ಣವರ ಅವರು ಶಿಶುನಾಳ ಶರೀಫರ ತತ್ವ ಪದಗಳನ್ನು ಹಾಡಿದರು. ಇವರಿಗೆ ಬಸನಗೌಡ ಪಾಟೀಲ, ಅಶೋಕ ಗದಗ ಅವರು ಸಂಗೀತ ನೀಡಿದರು. ಸುಮಾರು ಒಂದು ಘಂಟೆ ಕಾಲ ಜಾನಪದಗಳನ್ನು ಹಾಡಿ ಮನರಂಜಿಸಿದರು.