ಪುಲಿಗೆರೆ ಉತ್ಸವದಲ್ಲಿ ಸಂಗೀತ ಸುಧೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಪುಲಿಗೆರೆ ಉತ್ಸವದ 3ನೇ ದಿನದ ಸಂಜೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಯುವ ಕಲಾವಿದ ನಯನ ಯಾವಗಲ್ ಮಾರೋ ಬಿಹಾಗ ರಾಗದಲ್ಲಿ ಹಿಂದೂಸ್ತಾನಿ ಗಾಯನ ಪ್ರಾರಂಭಿಸಿ ಸಂಗೀತ ಪ್ರೇಮಿಗಳ ತಲೆದೂಗಿಸಿದರು. ಬಿಲಾಸ್ಖಾನ್ ತೋಡಿ ರಾಗದಲ್ಲಿ ಬಸವಣ್ಣನವರ ವಚನಗಳನ್ನು ತಮ್ಮ ಕಂಚಿನ ಕಂಠದ ಮೂಲಕ ಪ್ರಸ್ತುತಪಡಿಸಿ ಗಮನ ಸೆಳೆದರು. ಕಿರಣ್ ಯಾವಗಲ್ ತಬಲಾ ಹಾಗೂ ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು.

Advertisement

ಬೆಂಗಳೂರಿನ ಭರತನಾಟ್ಯ ಕಲಾವಿದೆ ಗೌರಿ ಸಾಗರ್ ತಂಡದಿಂದ ರಾಗ ದರ್ಬಾರಿ ಕಾನಡಾದಲ್ಲಿ ಶಿವ ಭಕ್ತಿಗೀತೆ, ರಾಮಾಯಣದ ತಾರಾ ಬಹುಮುಖ ಪ್ರತಿಭೆಯ ಕಲಾವಿದೆ ಮತ್ತು ವಾನರ ರಾಜರ ಪ್ರಸಂಗ ಪ್ರಸ್ತುತಿ, ಪ್ರಗ್ ಪೂರ್ವಿ ಕಲ್ಯಾಣಿಯಲ್ಲಿ ಶಿವನೃತ್ಯ ಮತ್ತು ಪಾರ್ವತಿ ದೇವಿಯ ಮಧುರ ಗಾನ ಪ್ರಸ್ತುತಿ, ರಾಗ ವಲಜಿಯಲ್ಲಿ ನೃತ್ಯ ಪ್ರದರ್ಶಿನಕ್ಕೆ ಸೇರಿದ ಅಪಾರ ಜನತೆಯಿಂದ ಚಪ್ಪಾಳೆಯ ಪ್ರೋತ್ಸಾಹ ಸಿಕ್ಕಿತು. ತಂಡದಲ್ಲಿ ಪೃಥ್ವಿ ಪಾರ್ಥಸಾರಥಿ, ಐಶ್ವರ್ಯ ಚೋಳ ರಾಜಪ್ಪ, ನಿತ್ಯಶ್ರೀ ಎಂ ಜೊತೆಯಲ್ಲಿದ್ದರು.

ನಂತರ ಸಂಧ್ಯಾರಾಗದಲ್ಲಿ ಬೆಂಗಳೂರಿನ ಮೌನ ರಾಮಚಂದ್ರ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಿತು. ರಾಗಶ್ರೀ ವಿಳಂಬಿತ ಜಪತಾಳ ದೊಂದಿಗೆ ಪ್ರಾರಂಭ ದೃತ್ ತಿನತಾಳ ಅಚಾ ಚವತಾಳ, ತದನಂತರ ಮನುಸು ಕರಗದೆ ಸ್ವಾಮಿ, ಬೋಲೋವ ವಿಠ್ಠಲ ಕರಾವ್ ವಿಠ್ಠಲ್ ಮರಾಠಿ ಭಜನ ಅಬಂಗ ಎಲ್ಲರ ಗಮನ ಸೆಳೆಯುವಂತಿದ್ದವು. ಇವರಿಗೆ ಯುವ ತಬಲಾಪಟು ರಾಘವೇಂದ್ರ ನಾಕೋಡ್ ತಬಲಾ ಹಾಗೂ ಚಿದಂಬರ ಜೋಶಿ ಹಾರ್ಮೋನಿಯಂ ಸಾಥ್ ನೀಡಿದರು.


Spread the love

LEAVE A REPLY

Please enter your comment!
Please enter your name here