ಈದ್ ಮಿಲಾದ್‌ಗೆ ಇಲ್ಲ ಡಿಜೆ; ಮುಸ್ಲಿಂ ಮುಖಂಡರ ಒಮ್ಮತದ ತೀರ್ಮಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸೆ. 5ರಂದು ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಜಯಂತಿ (ಈದ್ ಮಿಲಾದ್)ಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಯುವಕರು ಡಿಜೆ ಬಳಸುವುದನ್ನು ಬಿಟ್ಟು ಜನೋಪಯೋಗಿ ಕೆಲಸಗಳನ್ನು ಮಾಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮೌಲಾನಾ ಜಕಾರಿಯಾಸಾಬ್ ತಿಳಿಸಿದರು.

Advertisement

ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈದ್ ಮಿಲಾದ್ ದಿನ ಡಿಜೆ ಬಳಸಬಾರದು ಎಂದು ನಿರ್ಣಯಿಸಲಾಗಿದೆ. ಅದೇ ಹಣದಿಂದ ಬಡವರಿಗೆ ಆಹಾರ ಕಿಟ್ ನೀಡಿ, ಶಾಂತಿಯ ಸಂದೇಶ ಸಾರಬೇಕು ಎಂದು ತಿಳಿಸಿದರು.

ಈ ಕುರಿತು ಎಲ್ಲ ಜಮಾತ್ ಮುಖಂಡರು, ಈದ್ ಮಿಲಾದ್ ಕಮಿಟಿ ಪದಾಧಿಕಾರಿಗಳು, ನೌ-ಜವಾನ್ ಕಮಿಟಿಯ ಮುಖಂಡರು ಗಂಗಿಮಡಿಯ ಮಸೀದಿಯಲ್ಲಿ ಸಭೆ ನಡೆಸಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ. ಶಾಂತಿ ನಮ್ಮ ಮೂಲ ಧರ್ಮವಾಗಿದೆ. ಈ ನಿಟ್ಟಿನಲ್ಲಿ ಈದ್ ಮಿಲಾದ್ ದಿನದಂದು ಯಾರಾದರೂ ಡಿಜೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರೆ ಆ ಮನವಿಗೆ ಅವಕಾಶ ಕೊಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೌಲಾನಾ ಅಬ್ದುಲ್ ರಹೀಮ್, ಶಬ್ಬಿರ ಅಹಮದ್, ಯೂಸೂಪ್ ಸಾಬ್ ನಮಾಜಿ, ಮಹೆಬೂಬ್ ನದಾಫ್, ಮುನ್ನಾ ರಷ್ಮೀ, ಮುನ್ನಾ ಶೇಖ್, ಉಮರ್ ಫಾರೂಖ್ ಹುಬ್ಬಳ್ಳಿ, ಮಹಮ್ಮದ್ ಶಾಲಗಾರ, ಅಬ್ದುಲ್ ಮುನಾಫ್ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.

ಈದ್ ಮಿಲಾದ್ ಅತ್ಯಂತ ಪವಿತ್ರ ಹಬ್ಬ. ಈ ದಿನ ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡವುದೇ ನಮ್ಮ ಧ್ಯೇಯ. ಡಿಜೆ ಬಳಸುವುದರಿಂದ ರೋಗಿಗಳಿಗೆ, ವೃದ್ಧರಿಗೆ ಹಾಗೂ ಚಿಕ್ಕ ಮಕ್ಕಳಿಗೆ ಅಪಾಯ ಆಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಈದ್ ಮಿಲಾದ್ ದಿನದಂದು ಡಿಜೆ ಬಳಸದೇ ಶಾಂತಿಯ ಸಂದೇಶ ಸಾರಲು ಗದಗ-ಬೆಟಗೇರಿ ಜಮಾತ್ ಎಲ್ಲ ಮುಖಂಡರು ತಿರ್ಮಾನಿಸಿದ್ದಾರೆ.

– ಸಯ್ಯದ ಖಾಲಿದ್ ಕೊಪ್ಪಳ.


Spread the love

LEAVE A REPLY

Please enter your comment!
Please enter your name here