ದೇಶದಲ್ಲಿ ಏನು ತಪ್ಪಾದರೂ ಮುಸ್ಲಿಮರು ಕಾರಣ ಎಂದು BJP ಬಿಂಬಿಸುತ್ತದೆ: ದಿನೇಶ್ ಗುಂಡೂರಾವ್

0
Spread the love

ಬೆಂಗಳೂರು: ದೇಶದಲ್ಲಿ ಏನು ತಪ್ಪಾದರೂ ಮುಸ್ಲಿಮರು ಕಾರಣ ಎಂದು BJP ಅವರು ಬಿಂಬಿಸುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇವರದ್ದೇ ಸರ್ಕಾರದ ಅವಧಿಯಲ್ಲಿ ಅನೇಕ ನೋಟಿಸ್‌ಗಳನ್ನು ಕೊಡಲಾಗಿದೆ. ಅದನ್ನೆಲ್ಲಾ ಕಾನೂನು ಪ್ರಕಾರ ತೀರ್ಮಾನ ಮಾಡಬೇಕೇ ಹೊರತು ಕೋಮುವಾದದ ಲೇಪವನ್ನು ಹಾಕೋದು ಸರಿಯಲ್ಲ. ಗೊಂದಲ ಸೃಷ್ಟಿ ಮಾಡಿ ರಾಜಕೀಯ ಲಾಭಕ್ಕಾಗಿ ಮಾಡೋದು ಸರಿಯಲ್ಲ. ಚುನಾವಣೆ ಮುಗಿದ ಮೇಲೆ ಯಾರೂ ಕಾಣಲ್ಲ. ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಇದು ಸರಿಯಲ್ಲ.

Advertisement

ಅನೇಕ ವಿಚಾರಗಳನ್ನು ಎತ್ತಿ ಕಟ್ಟುತ್ತಿದ್ದಾರೆ. ನಮ್ಮ ಸರ್ಕಾರ ಯಾರ ಭೂಮಿಯನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ. ಯಾರನ್ನೂ ಒಕ್ಕಲೆಬ್ಬಿಸಲ್ಲ, ಯಾರ ಭೂಮಿಯನ್ನು ಕಬಳಿಸಲ್ಲ. ಬಿಜೆಪಿಯವರಿಗೆ ನಿಜಾಂಶದ ಬಗ್ಗೆ ಚರ್ಚೆಯಾಗಬೇಕಿಲ್ಲ. ಸುಮ್ಮನೇ ಸುದ್ದಿಯಾಗಬೇಕಷ್ಟೆ. ಅದಕ್ಕೇ ಈ ರೀತಿ ಮುಸ್ಲಿಮರು ಆಸ್ತಿ ಕಬಳಿಸ್ತಿದ್ದಾರೆ. ಅವರು ಒಳ್ಳೆಯವರಲ್ಲ ದೇಶದ್ರೋಹಿಗಳು, ದೇಶ ಪ್ರೇಮ ಇಲ್ಲ. ದೇಶದಲ್ಲಿ ಏನು ತಪ್ಪಾದರೂ ಅವರೇ ಕಾರಣ ಎಂದು ಬಿಂಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here