ಬೆಂಗಳೂರು: ಚುನಾವಣೆಗೆ ಮುಂಚೆ ಮುಸ್ಲಿಮರನ್ನು ತೊಡೆಯ ಮೇಲೆ ಕೂರಿಸಿಕೊಂಡು ಮುದ್ದಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಈಗ ಮುಸ್ಲಿಂ ದ್ವೇಷಿಯಾಗಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, ಧರ್ಮದ ನಡುವೆ ಬೆಂಕಿ ಹಚ್ಚಿ ದೇಶ ಒಡೆಯುವ ಬಿಜೆಪಿಯವರ ಧರ್ಮ ರೋಗ ನಿಮಗೂ ಅಂಟಿದ್ದಕ್ಕೆ ವಿಷಾದವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
Advertisement
ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೂ ಪಾಲಿದೆ ಎಂಬ ಸಿದ್ದರಾಮಯ್ಯರ ಹೇಳಿಕೆಯಲ್ಲಿ ತಪ್ಪೇನಿದೆ?. ಸಿದ್ದರಾಮಯ್ಯ ಏನಾದರೂ ದೇಶದ ಸಂಪತ್ತೆಲ್ಲಾ ಮುಸ್ಲಿಮರಿಗೇ ಸೇರಬೇಕು ಎಂದಿದ್ದಾರಾ?. ಹಾಗೇನಾದರೂ ಹೇಳಿಕೆ ಕೊಟ್ಟಿದಿದ್ದರೆ ಜೆಡಿಎಸ್- ಬಿಜೆಪಿಯವರು ವಿರೋಧಿಸುವುದರಲ್ಲಿ ಅರ್ಥವಿರುತಿತ್ತು. ಈ ದೇಶದಲ್ಲಿರುವ ಮುಸ್ಲಿಮರು ಭಾರತೀಯರೇ ಹೊರತು ಅನ್ಯದೇಶದವರಲ್ಲ ಎಂದಿದ್ದಾರೆ.