ವಿಧಾನಸೌಧ ಪ್ರವೇಶಕ್ಕೆ ಕೊಡ್ಬೇಕು ದುಡ್ಡು: ಪ್ರವಾಸೋದ್ಯಮ ಹೆಸರಲ್ಲಿ ಹಣ ವಸೂಲಿ!? ಸರ್ಕಾರದ ಷರತ್ತು ಹೀಗಿದೆ!

0
Spread the love

ಬೆಂಗಳೂರು: ವಿಧಾನಸೌಧ ವೀಕ್ಷಣೆಗೆ ಪ್ರವಾಸಿಗರಿಂದ ಶುಲ್ಕ ವಸೂಲಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದು ಜನರಿಗೆ ಮತ್ತಷ್ಟು ಹೊರೆಯಾಗಲಿದೆ.

Advertisement

ಪ್ರವಾಸೋದ್ಯಮ ಇಲಾಖೆಯ ಮೂಲಕ ವಿಧಾನಸೌಧ ವೀಕ್ಷಣೆಗೆ ಟೂರ್​ ಗೈಡ್​ ಏರ್ಪಡಿಸಲಾಗಿದೆ. ಸಾರ್ವತ್ರಿಕ ರಜಾ ದಿನಗಳಂದು ಮಾತ್ರ ಟೂರ್​ ಗೈಡ್​ ವ್ಯವಸ್ಥೆ ಇರುತ್ತದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರು ಶುಲ್ಕ ಪಾವತಿಸಿ ವಿಧಾನಸೌಧ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ವಿಧಾನಸೌಧ ಕಟ್ಟಡಕ್ಕೆ ಪ್ರಸ್ತುತ ಶಾಶ್ವತ ದೀಪಾಲಂಕಾರ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ, ಕಟ್ಟಡದ ಸೌಂದರ್ಯವು ಹೆಚ್ಚಾಗಿದ್ದು, ಪ್ರವಾಸಿಗರು ವಿಧಾನಸೌಧವನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ವಿಧಾನಸೌಧ ಕಟ್ಟಡ ವೀಕ್ಷಿಸಲು “Guided Tour” ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ವಿದೇಶಿ ಮತ್ತು ದೇಶಿಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ.

ವಿಧಾನಸೌಧ ನೋಡಲು ಷರತ್ತು:-

* ಸಾರ್ವತ್ರಿಕ ರಜೆ ದಿನದಂದು ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೂ ಅವಕಾಶ.

* 30ಜನರ ತಂಡದೊಂದಿಗೆ ವೀಕ್ಷಣೆಗೆ ಅವಕಾಶ..

* ಆನ್ ಲೈನ್ ಮುಖಾಂತರ ಟಿಕೆಟ್ ಬುಕ್ ಮಾಡಿಕೊಳ್ಳಬೇಕು.

* ಪ್ರವೇಶ ದರವನ್ನ ನೀಡಿ ಬರಬೇಕು…

* ಪೊಲೀಸ್ ಭದ್ರತಾ ಸೂಚನೆ ಪಾಲಿಸಬೇಕು..

* ಅಧಿಕೃತ ದಾಖಲೆಯನ್ನು ನೀಡಿ ಪ್ರವೇಶ ಮಾಡಬೇಕು.

* ವಿಧಾನಸೌಧದ ಕಟ್ಟಡ, ಆವರಣಕ್ಕೆ ಹಾನಿಯಾಗದಂತೆ ಸಹಕರಿಸಬೇಕು..

* ಕಡ್ಡಾಯವಾಗಿ ಎಲ್ಲಾ ನಿಯಮಗಳನ್ನು ಪಾಲಿಸಬೇಕು..


Spread the love

LEAVE A REPLY

Please enter your comment!
Please enter your name here