ಬೆಂಗಳೂರು:– ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಗುಡ್ ನ್ಯೂಸ್ ನೀಡಿದೆ. ಸೋಮವಾರ ಅಂದ್ರೆ ಜನವರಿ 13ರಿಂದ ಮೆಟ್ರೋ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತಿದೆ.
ಇನ್ಮುಂದೆ ಪ್ರತಿ ಸೋಮವಾರದಂದು ಮೆಟ್ರೋ ಸಂಚಾರ ಬೆಳಗ್ಗೆ 4.15ರಿಂದ ಆರಂಭವಾಗಲಿದೆ. ಇಷ್ಟು ದಿನ ಸೋಮವಾರ ಬೆಳ್ಳಗೆ 5ಗಂಟೆಗೆ ಮೊದಲ ರೈಲು ಸಂಚಾರ ಆರಂಭವಾಗುತ್ತಾ ಇತ್ತು. ಶನಿವಾರ, ಭಾನುವಾರದ ವೀಕೆಂಡ್‌ನಲ್ಲಿ ಸಿಟಿ ಹೊರಗೆ ಹೋಗುವ ಪ್ರಯಾಣಿಕರು ಸೋಮವಾರ ಬೆಳಗಿನ ಜಾವ ಆಟೋ, ಬಸ್‌ಗಳ ಕಡೆ ಮುಖ ಮಾಡುತ್ತಿದ್ದರು.
ಸೋಮವಾರ ಬೆಳಗಿನ ಜಾವ ಸಿಲಿಕಾನ್ ಸಿಟಿ ವಾಪಸ್ ಆಗುವ ಪ್ರಯಾಣಿಕರಿಗಾಗಿ ಮೆಟ್ರೋ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ಮುಂದೆ ಮೆಟ್ರೋ ಪ್ರಯಾಣಿಕರು ಬೆಳಗ್ಗೆ 4.15ಕ್ಕೆ ಮೆಟ್ರೋ ಸೇವೆ ಬಳಸಬಹುದು. ನಗರಕ್ಕೆ ಹಿಂತಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸಂಚಾರದಲ್ಲಿ ಈ ಬದಲಾವಣೆ ಮಾಡಲಾಗಿದೆ. ಇದೇ ಜನವರಿ 13ರ ಸೋಮವಾರದಿಂದ ಈ ಸೇವೆ ಜಾರಿಗೆ ಬರಲಿದೆ.
ನಮ್ಮ ಮೆಟ್ರೋ ಸಮಯ ಬದಲಾವಣೆಯ ಬಗ್ಗೆ BMRCL ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಜ.13 ರಿಂದ ಜಾರಿಗೆ ಬರುವಂತೆ ಈಗಿರುವ ಮುಂಜಾನೆ 5 ಕ್ಕೆ ಬದಲಾಗಿ 4:15 ರಿಂದ ಪ್ರಾರಂಭಿಸಲಿದೆ. ನಮ್ಮ ಮೆಟ್ರೋ ನಿಗಮವು ಪ್ರತಿ ಸೋಮವಾರದಂದು ಮಾತ್ರ ಮೆಟ್ರೋ ಸೇವೆಯನ್ನು 4:15 ರಿಂದ ಪ್ರಾರಂಭಿಸಲಿದೆ. ಎಂದು ಹೇಳಿದೆ.
ಉಳಿದ ದಿನಗಳ ಮೆಟ್ರೋ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದು, ಸಾರ್ವಜನಿಕರು ತಮ್ಮ ಸುಗಮ ಪ್ರಯಾಣಕ್ಕಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕಾಗಿ ಕೋರಿದೆ.