ಮಂಡ್ಯ:- ಇತ್ತೀಚೆಗೆ ನಡೆದ 2024 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಆಗಿದ್ದ HD ಕುಮಾರಸ್ವಾಮಿ ಅವರು ಭರ್ಜರಿ ಗೆಲುವು ಸಾಧಿಸಿದ್ದರು.
ಹೀಗಾಗಿ ಮಂಡ್ಯದ ಪಾಂಡವಪುರ ಪಟ್ಟಣದಲ್ಲಿ ಮಾಜಿ ಸಿಎಂ HD ಕುಮಾರಸ್ವಾಮಿಗೆ ಇಂದು ಅಭಿನಂದನೆ ಹಾಗೂ ಕೃತಜ್ಞತಾ ಸಮಾವೇಶ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮೇಲುಕೋಟೆ ಕ್ಷೇತ್ರದ ಮತದಾರರಿಗೆ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು. ಮಂಡ್ಯದ ಪಾಂಡವಪುರ ಪಟ್ಟಣದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದ್ದು, ಪಾಂಡವ ಕ್ರೀಡಾಂಗಣ ಸಮೀಪ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿತ್ತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಜನರು ಭರ್ಜರಿ ಬಾಡೂಟ ಸವಿಯುತ್ತಿದ್ದಾರೆ. ವೇದಿಕೆ ಕಾರ್ಯಕ್ರಮ ಸಮೀಪದ ಖಾಸಗಿ ಸಮುದಾಯ ಭವನದಲ್ಲಿ ಊಟ ವ್ಯವಸ್ಥೆ ಮಾಡಲಾಗಿತ್ತು. 5 ಟನ್ ಮಟನ್, 2.5 ಟನ್ ಚಿಕನ್, ಬೋಟಿ, 1 ಲಕ್ಷ ಮೊಟ್ಟೆಯಿಂದ ಬಗೆ ಬಗೆಯ ಖಾದ್ಯ ತಯಾರಿ ಮಾಡಲಾಗಿದೆ. ಮುದ್ದೆ, ಬೋಟಿ ಗೊಜ್ಜು, ಮಟನ್, ಚಿಕನ್ ಚಾಪ್ಸ್, ಎಗ್ ಬುರ್ಜಿ, ಶಾವಿಗೆ ಪಾಯಸ, ಅನ್ನ, ಸಾಂಬಾರ್, ರಸಂ ಸೇರಿ ಹಲವು ಖಾದ್ಯ ತಯಾರಿ ಮಾಡಲಾಗಿದೆ.
ಭರ್ಜರಿ ಬಾಡೂಟ ಸವಿದು ಜೆಡಿಎಸ್-ಬಿಜೆಪಿ ಕಾರ್ಯಕರ್ತರು ವೇದಿಕೆಯತ್ತ ಹೊರಡುತ್ತಿರುವ ದೃಶ್ಯ ಕಂಡು ಬಂದಿದೆ.
ಪಾಂಡವ ಕ್ರೀಡಾಂಗಣದಲ್ಲಿ ನಾನ್ ವೆಜ್ ಜೊತೆಗೆ ವೆಜ್ ಊಟದ ವ್ಯವಸ್ಥೆ ಕೂಡ ಮಾಡಲಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನತೆ ಆಗಮಿಸಿ ಭರ್ಜರಿ ಊಟ ಸವಿದಿದ್ದಾರೆ.