ಬೆಂಗಳೂರು: ಈ ಬಾರಿ ಭರತ್ʼಗೆ ಟಿಕೆಟ್ ಬೇಡ ಎಂಬುದು ನನ್ನ ಅಪೇಕ್ಷೆ ಇತ್ತು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎರಡು ದಿನ ಸಮಯ ಕೇಳಿದ್ದೆ. ಆದರೆ ಸಮಯ ಕೊಡದೇ ಟಿಕೆಟ್ ಘೋಷಣೆ ಮಾಡಿದ್ದಾರೆ. ನಡ್ಡಾ ಅವರು ನನಗೆ ಮಾತನಾಡುವುದಕ್ಕೆ ಅವಕಾಶವನ್ನೇ ನೀಡಲಿಲ್ಲ ಎಂದು ಹೇಳಿದರು. ನಿಮ್ಮ ಮಗನಿಗೆ ಟಿಕೆಟ್. ಅಲ್ಲಿ ನಿಮಗೆ ಹೆಸರಿದೆ, ಗೆಲುವು ಮುಖ್ಯ ಎಂದರು.
Advertisement
ನಾನು ಎರಡು ದಿನ ಸಮಯ ನೀಡಿ ಎಂದೆ, ಆದರೆ ಅವರು ಅದಕ್ಕೆ ಅವಕಾಶ ನೀಡಲೇ ಇಲ್ಲ. ನಿರ್ಧಾರ ಆಗಿದೆ, ಸರ್ವೇ ವರದಿ ಕೂಡ ಭರತ್ ಪರ ಇದೆ ಎಂದು ಅಮಿತ್ ಶಾ ಕೂಡ ಹೇಳಿದರು. ಚುನಾವಣೆ ಎದುರಿಸಿ, ಗೆಲ್ಲಬೇಕು ಎಂದರು. ಹೀಗಾಗಿ, ನಾನು ವರಿಷ್ಠರ ನಿರ್ಧಾರಕ್ಕೆ ತಲೆಬಾಗಿದ್ದೇನೆ. ಈ ಬಾರಿ ಭರತ್ಗೆ ಟಿಕೆಟ್ ಬೇಡ ಎಂಬುದು ನನ್ನ ಅಪೇಕ್ಷೆ ಇತ್ತು ಎಂದು ಹೇಳಿದರು.