ನನ್ನ ಕಂಡರೇ ವಿಪಕ್ಷಗಳಿಗೆ ಭಯ. ಹೀಗಾಗಿ ಟಾರ್ಗೆಟ್ ಮಾಡುತ್ತಾರೆ: ಸಿಎಂ ಸಿದ್ದರಾಮಯ್ಯ

0
Spread the love

ಮೈಸೂರು: ನನ್ನ ಕಂಡರೇ ವಿಪಕ್ಷಗಳಿಗೆ ಭಯ. ಹೀಗಾಗಿ ಪದೇ ಪದೆ ನನ್ನ ಟಾರ್ಗೆಟ್ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ಜೀವನದ ರಾಜಕೀಯ ಸಂಬಂಧದ ಮೊದಲ ಕೇಸ್. ನಾನು ಮತ್ತೆ ಹೇಳುತ್ತಿದ್ದೇನೆ. ಇದು ರಾಜಕೀಯ ಸಂಬಂಧದ ಮೊದಲ ಕೇಸ್. ಪ್ಲೀಸ್ ಅಂಡರ್‌ಲೈನ್ ದಿಸ್ ವರ್ಡ್.

Advertisement

ಕಾನೂನು ಹೋರಾಟವನ್ನ ನಮ್ಮ ವಕೀಲರು ಮಾಡುತ್ತಾರೆ ಎಂದು ತಿಳಿಸಿದರು. ಇವತ್ತು ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ನನ್ನ ಸ್ವಾಗತಕ್ಕೆ ಬಂದಿದ್ದಾರೆ. ನಾನು ಯಾರನ್ನೂ ಕರೆದಿಲ್ಲ, ಅವರೇ ಪ್ರೀತಿಯಿಂದ ಬಂದಿದ್ದಾರೆ. ನನಗೆ ಯಾವ ಭಯವೂ ಇಲ್ಲ. ನಾನು ಭಯಗೊಂಡ ರೀತಿ ಕಾಣುತ್ತಿದ್ದೀನಾ ಎಂದು ಕೇಳಿದರು.


Spread the love

LEAVE A REPLY

Please enter your comment!
Please enter your name here