ಮೈಸೂರು: ಹಬ್ಬನಘಟ್ಟ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ನಡೆಯುತ್ತಿರುವ ಕಾಲುವೆ ಕ್ರಾಸಿಂಗ್ ಕಾಮಗಾರಿ ಕಾರಣ, ಫೆಬ್ರವರಿ 16ರ ಸೋಮವಾರ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಅರಸೀಕೆರೆ–ಮೈಸೂರು ಪ್ಯಾಸೆಂಜರ್, ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ಮತ್ತು ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ರೈಲುಗಳು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಮೈಸೂರು–ಅರಸೀಕೆರೆ ಮಾರ್ಗದಲ್ಲಿ ಭಾಗಶಃ ರದ್ದು ಮಾಡಲಾಗಿದ್ದು, ಅರಸೀಕೆರೆಯಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭವಾಗಲಿದೆ. ಇತರ ರೈಲುಗಳಲ್ಲಿ ಮೈಸೂರು–ಅರಸೀಕೆರೆ ಪ್ಯಾಸೆಂಜರ್ 110 ನಿಮಿಷ ಮತ್ತು ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ 100 ನಿಮಿಷ ಮಾರ್ಗ ಮಧ್ಯೆ ನಿಯಂತ್ರಣಕ್ಕೆ ಒಳಗಾಗಲಿದೆ.
ಅರಸೀಕೆರೆ–ಮೈಸೂರು ಪ್ಯಾಸೆಂಜರ್ ಮತ್ತು ಮೈಸೂರು–ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್ ವಿಶೇಷ ರೈಲುಗಳು 100 ನಿಮಿಷ ವಿಳಂಬದಿಂದ ಸಂಚಾರ ನಡೆಸಲಿವೆ. ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆಯನ್ನು ಪರಿಶೀಲಿಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ.



