ಬೆಂಗಳೂರು: ವಿಶ್ವವಿಖ್ಯಾತ ದಸರಾ ಉದ್ಘಾಟನೆ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೆ ರಾಜವಂಶಸ್ಥೆ ಪ್ರಮೋದಾದೇವಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಸಿದ್ದರಾಮಯ್ಯ ಅಲ್ಪಸಂಖ್ಯಾತರ ಒಲೈಕೆ ಮಾಡ್ತಿದ್ದಾರೆ. ಮಿಸ್ಟರ್ ಸಿದ್ರಾಮಣ್ಣ ನಿನಗೆ ಬೇರೆ ಯಾರು ಸಿಗಲಿಲ್ವೇ? ಎಸ್ ಸಿ,ಎಸ್ಟಿ ಬೇರೆಯವರು ಸಿಗಲಿಲ್ಲ? ಟಿಪ್ಪು ಸಂತತಿ ಕರೆತಂದು ಮಾಡಬೇಕೇ?
ಎಂದು ವಾಗ್ಧಾಳಿ ನಡೆಸಿದ್ದಾರೆ. ಇನ್ನೂ ಯಧುವೀರ್ ವಂಶವನ್ನು ಸೆರೆಯಲ್ಲಿಟ್ಟವರು. ಹಿಂದೂಗಳಲ್ಲಿ ಒಳ್ಳೆಯವರು ಯಾರೂ ಇರಲಿಲ್ವೇ? ಒಳ್ಳೆಯ ಕವಿಗಳು ಇರಲಿಲ್ವೇ? ಎಲ್ಲಾ ಸುತ್ತಿ ಇಲ್ಲೇ ಹಿಡಿದು ತರುತ್ತೀರಲ್ಲ. ವೋಟಿಗಾಗಿ ಈ ರೀತಿ ಮಾಡ್ತೀರಲ್ಲ.
ಪಕ್ಕಾ ಹಿಂದೂ ಭಾವನೆ ಆಘಾತ ಮಾಡಿದ್ದಾರೆ. ಮುಂದೆ ನಮ್ಮ ಸರ್ಕಾರ ಬಂದೇ ಬರುತ್ತೆ. ಆಗ ನಾವು ಕಾನೂನನ್ನು ತರುತ್ತೇವೆ. ಧಾರ್ಮಿಕ ಶಿಷ್ಟಾಚಾರವನ್ನು ತರುತ್ತೇವೆ. ತರಲೇಬೇಕು ಇಲ್ಲವಾದರೆ ಕುತಂತ್ರ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.