ಮೈಸೂರು: ಖ್ಯಾತ ಭಾಷಾವಿಜ್ಞಾನಿ ಡಾ. ಕೆ ಕೆಂಪೇಗೌಡ ವಿಧಿವಶ.!

0
Spread the love

ಮೈಸೂರು: ಖ್ಯಾತ ಕನ್ನಡ ಭಾಷಾವಿಜ್ಞಾನಿ ಡಾ. ಕೆ. ಕೆಂಪೇಗೌಡರು ವಿಧಿವಶರಾಗಿದ್ದಾರೆ. ಹಿರಿಯ ಲೇಖಕ ಕೆ. ಕೆಂಪೇಗೌಡ ಅವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಶೆಟ್ಟಿಹಳ್ಳಿಯಲ್ಲಿ ಮಾಧ್ಯಮಿಕ ಮತ್ತು ಚನ್ನಪಟ್ಟಣದಲ್ಲಿ ಹೈಯರ್ ಸೆಕೆಂಡರಿ ಶಿಕ್ಷಣ ಪಡೆದರು.

Advertisement

ಭಾಷಾ ವಿಜ್ಞಾನ ಕೋಶ, ಧ್ವನಿಮಾ ವಿಜ್ಞಾನ, ಸಾಮಾನ್ಯ ಭಾಷಾ ವಿಜ್ಞಾನ, ಕನ್ನಡ ಭಾಷಾ ಚರಿತ್ರೆ, ತೌಲನಿಕ ದ್ರಾವಿಡ ಭಾಷಾ ವಿಜ್ಞಾನ, ಕನ್ನಡ ಭಾಷ ಸ್ವರೂಪ, ಕನ್ನಡ ಉಪಭಾಷೆಗಳ ಅಧ್ಯಯನ ಸೇರಿದಂತೆ ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಲೇಖನಗಳನ್ನು ಕನ್ನಡಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಮೈಸೂರಿನ ಸರಸ್ವತಿಪುರಂನಲ್ಲಿರುವ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಚನ್ನಪಟ್ಟಣದ ಹೆಚ್ ಬ್ಯಾಡ್ರಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.


Spread the love

LEAVE A REPLY

Please enter your comment!
Please enter your name here