HomeKarnataka Newsಮೈಸೂರಿನ ಏರ್ ಕ್ವಾಲಿಟಿ ಕುಸಿತ: ಪರಿಸ್ಥಿತಿ ಚಿಂತಾಜನಕ ಎಂದ ತಜ್ಞರು!

ಮೈಸೂರಿನ ಏರ್ ಕ್ವಾಲಿಟಿ ಕುಸಿತ: ಪರಿಸ್ಥಿತಿ ಚಿಂತಾಜನಕ ಎಂದ ತಜ್ಞರು!

For Dai;y Updates Join Our whatsapp Group

Spread the love

ಬೆಂಗಳೂರು: ಬೆಂಗಳೂರು ನಗರದಲ್ಲಿ ವಾಯು ಗುಣಮಟ್ಟ ಇನ್ನೂ ಹದಗೆಟ್ಟ ಸ್ಥಿತಿಯಲ್ಲೇ ಮುಂದುವರಿದಿದ್ದು, ಆರೋಗ್ಯದ ಬಗ್ಗೆ ಆತಂಕ ಮೂಡಿಸಿದೆ.

ಇದಕ್ಕಿಂತಲೂ ಹೆಚ್ಚಾಗಿ ಮೈಸೂರಿನಲ್ಲಿ ಏರ್ ಕ್ವಾಲಿಟಿ ಮತ್ತಷ್ಟು ಕುಸಿದಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇಂದಿನ ಅಂಕಿ-ಅಂಶಗಳ ಪ್ರಕಾರ, ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ AQI ಇಂದು 166ಕ್ಕೆ ತಲುಪಿದ್ದು, ಇನ್ನೂ ‘ಅನಾರೋಗ್ಯಕರ’ ಮಟ್ಟದಲ್ಲೇ ಇದೆ. ಇದೇ ವೇಳೆ ಮೈಸೂರಿನಲ್ಲಿ AQI 185ಕ್ಕೆ ಏರಿಕೆಯಾಗಿದ್ದು, ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ. WHO ಮಾನದಂಡಗಳ ಪ್ರಕಾರ ಈ ಮಟ್ಟದ ವಾಯು ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ಇನ್ನೊಂದೆಡೆ ಕರಾವಳಿ ಭಾಗಗಳಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದ್ದು, ಮಂಗಳೂರು ಮತ್ತು ಉಡುಪಿ ನಗರಗಳಲ್ಲಿ ವಾಯು ಗುಣಮಟ್ಟ ಮಧ್ಯಮ ಮಟ್ಟದಲ್ಲಿದೆ.

ರಾಜ್ಯದ ಇತರ ಪ್ರಮುಖ ನಗರಗಳ ಇಂದಿನ AQI ವಿವರ ಹೀಗಿದೆ:
ಬೆಂಗಳೂರು – 166
ಮಂಗಳೂರು – 102
ಮೈಸೂರು – 185
ಬೆಳಗಾವಿ – 64
ಕಲಬುರ್ಗಿ – 82
ಶಿವಮೊಗ್ಗ – 126
ಬಳ್ಳಾರಿ – 120
ಹುಬ್ಬಳ್ಳಿ – 84
ಉಡುಪಿ – 93
ವಿಜಯಪುರ – 119

AQI ವರ್ಗೀಕರಣ ಪ್ರಕಾರ 0-50 ‘ಉತ್ತಮ’, 50-100 ‘ಮಧ್ಯಮ’, 100-150 ‘ಕಳಪೆ’, 150-200 ‘ಅನಾರೋಗ್ಯಕರ’, 200-300 ‘ಗಂಭೀರ’ ಹಾಗೂ 300ಕ್ಕಿಂತ ಮೇಲಿನ ಮಟ್ಟ ‘ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ.

ತಜ್ಞರು ಮಕ್ಕಳಿಗೆ, ವೃದ್ಧರಿಗೆ ಹಾಗೂ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳಿರುವವರಿಗೆ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!