ಚಿಕ್ಕಮಗಳೂರು:- ವಾಕಿಂಗ್ ಹೋಗಿದ್ದ ಯುವ ವೈದ್ಯ ನಿಗೂಢ ಸಾವನ್ನಪ್ಪಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಕಟ್ಟೆಹೊಳೆ ಗ್ರಾಮದ ಬಳಿ ಜರುಗಿದೆ.
Advertisement
ಅಜ್ಜಂಪುರ ಸಮುದಾಯ ಆರೋಗ್ಯ ಕೇಂದ್ರ ವೈದ್ಯ 27 ವರ್ಷದ ಡಾ. ಉತ್ತಮ್ ಮೃತ ದುರ್ದೈವಿ. ವಾಕ್ ಗೆ ಹೋಗುವುದಾಗಿ ಹೇಳಿ ಬಂದಿದ್ದ ವೈದ್ಯ ಉತ್ತಮ್ ಸಾವನ್ನಪ್ಪಿದ್ದು, ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕಿಸಲಾಗಿದೆ.
ಆದ್ರೆ, ವೈದ್ಯ ಉತ್ತಮ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭದ್ರಾವತಿ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.