ನಿಗೂಢ ಜ್ವರಕ್ಕೆ ಕಾಂಗೋ ಗಣರಾಜ್ಯದ ನೈಋತ್ಯ ಪ್ರಾಂತ್ಯದಲ್ಲಿ 143 ಮಂದಿ ಬಲಿ

0
Spread the love

ಕಿನ್ಶಾಸ : ತೀವ್ರ ಜ್ವರ ಹಾಗೂ ತಲೆನೋವಿನಿಂದ ಬಳಲುತ್ತಿದ್ದ 143 ಮಂದಿ ಮೃತಪಟ್ಟಿದ್ದು 500ಕ್ಕೂ ಹೆಚ್ಚು ಜನರು ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಘಟನೆ ಕಾಂಗೋ ಗಣರಾಜ್ಯದ ನೈಋತ್ಯ ಪ್ರಾಂತ್ಯದಲ್ಲಿ ನಡೆದಿದೆ. ಕಳೆದ ನವೆಂಬರ್ ತಿಂಗಳಲ್ಲಿ 143 ಮಂದಿ ಬಲಿಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಸೋಂಕಿತ ಜನರು ತೀವ್ರ ಜ್ವರ ಮತ್ತು ತಲೆನೋವಿನಿಂದ ಬಳಲುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ಕ್ವಾಂಗೊ ಪ್ರಾಂತದ ಸಹಾಯಕ ಗವರ್ನರ್ ರೆಮಿ ಸಾಕಿ ಹೇಳಿದ್ದಾರೆ.

ರೋಗವನ್ನು ಗುರುತಿಸಲು ಆರೋಗ್ಯ ತಜ್ಞರ ತಂಡವನ್ನು ಪಾಂಝಿ ವಲಯಕ್ಕೆ ರವಾನಿಸಲಾಗಿದ್ದು ಸ್ಯಾಂಪಲ್ ಸಂಗ್ರಹಿಸಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ ಎಂದು ಪ್ರಾಂತೀಯ ಆರೋಗ್ಯ ಸಚಿವ ಅಪೊಲಿನೈರ್ ಯುಂಬಾ ಹೇಳಿದ್ದಾರೆ. ಗ್ರಾಮೀಣ ಆರೋಗ್ಯ ವಲಯದಲ್ಲಿರುವ ಪಾಂಝಿ ನಗರಕ್ಕೆ ಔಷಧ ಪೂರೈಕೆಗೆ ತೊಂದರೆಯಾಗಿದೆ. ಸಕಾಲಿಕ ಚಿಕಿತ್ಸೆ ದೊರಕದೆ ರೋಗಿಗಳು ತಮ್ಮ ಮನೆಯಲ್ಲೇ ಸಾಯುತ್ತಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ನಿಗೂಢ ರೋಗದ ಬಗ್ಗೆ ಕಳೆದ ವಾರ ಮಾಹಿತಿ ಲಭಿಸಿದ ಬಳಿಕ ಕಾಂಗೋದ ಸಾರ್ವಜನಿಕ ಆರೋಗ್ಯ ಇಲಾಖೆಯ ಜತೆಗೆ ಕೆಲಸ ಮಾಡುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಜನರು ಸಾಮೂಹಿಕವಾಗಿ ಸೇರುವುದನ್ನು ತಡೆಯಬೇಕು. ಜೊತೆಗೆ ಪ್ರತಿಭಾರಿ ಸೋಪು ಬಳಿಸಿ ನೀರಿನಿಂದ ಕೈತೊಳೆದುಕೊಳ್ಳಬೇಕು. ವಾಸವಿರುವ ಸುತ್ತಮುತ್ತ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಜನರಿಗೆ ಅಧಿಕಾರಿಗಳು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here