ಬೆಂಗಳೂರು: ನೀವು ಸಂಗೊಳ್ಳಿ ರಾಯಣ್ಣ ಜೊತೆ ಹೋಲಿಕೆ ಮಾಡಿಕೊಳ್ಳಬೇಡಿ, ನಿಮ್ಮ ಹಾಗೆ ರಾಯಣ್ಣ 14 ಸೈಟ್ ಪಡೆದವರಲ್ಲ ಎಂದು ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೀವು ಸಂಗೊಳ್ಳಿ ರಾಯಣ್ಣ ಜೊತೆ ಹೋಲಿಕೆ ಮಾಡಿಕೊಳ್ಳಬೇಡಿ. ರಾಯಣ್ಣ ಒಂದು ಎಕರೆ ಜಾಗವನ್ನೂ ತನ್ನ ಕುಟುಂಬಕ್ಕೆ ಮಾಡಿಕೊಂಡವರಲ್ಲ.
Advertisement
ರಾಯಣ್ಣ ನಿಮ್ಮ ಹಾಗೆ ಕುಟುಂಬಕ್ಕೆ ಆಸ್ತಿ ಮಾಡಿದವರಲ್ಲ. ನಿಮ್ಮ ಹಾಗೆ ರಾಯಣ್ಣ 14 ಸೈಟ್ ಪಡೆದವರಲ್ಲ. ನೀವು ರಾಜ್ಯದ ಜನರ ಕ್ಷಮೆ ಕೇಳಬೇಕು. ರಾಯಣ್ಣನ ಹೆಸರು ಹೇಳುವುದಕ್ಕೂ ನೀವು ನಾಲಾಯಕ್. ರಾಣಿ ಚೆನ್ನಮ್ಮನ ಹೆಸರು ಹೇಳಲೂ ನೀವು ಲಾಯಕ್ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.