ಮಂಡ್ಯ:– ಗಣೇಶ ಮೂರ್ತಿ ಮೆರವಣಿಗೆ ವಿಚಾರವಾಗಿ ನಾಗಮಂಗಲದಲ್ಲಿ ನಡೆದಿದ್ದ ಗಲಭೆ ಕೇಸ್ ಗೆ ಸಂಬಂಧಿಸಿದಂತೆ ದೂರು ಕೊಟ್ಟಿದ್ದ ಪೊಲೀಸ್ ಅಧಿಕಾರಿಯನ್ನೇ ಇದೀಗ ಸಸ್ಪೆಂಡ್ ಮಾಡಲಾಗಿದೆ.
Advertisement
ನಾಗಮಂಗಲ ಕೋಮುಗಲಭೆಗೆ ಬಳಿಕ ದೂರು ನೀಡಿದ್ದ ಇಲ್ಲಿನ ಟೌನ್ ಠಾಣೆಯ ಪಿಎಸ್‌ಐ ಬಿ.ಜೆ.ರವಿ ಅವರನ್ನು ಅಮಾನತು ಮಾಡಿ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಆದೇಶಿಸಿದ್ದಾರೆ.
ಗಣೇಶ ವಿಸರ್ಜನೆ ಮಾಡುತ್ತಿದ್ದವರ ಪ್ರಚೋದನೆಯಿಂದ ಗಲಭೆ ಸೃಷ್ಟಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂದು ಪಿಎಸ್‌ಐ ರವಿ ಅವರನ್ನ ಅಮಾನತುಗೊಳಿಸಲಾಗಿದೆ. ಅಲ್ಲದೇ ಪಿಎಸ್‌ಐ ಜೊತೆಗೆ ಠಾಣೆಗೆ ಗುಪ್ತ ಮಾಹಿತಿ ಸಂಗ್ರಹ ಪೇದೆ ರಮೇಶ್ ಅವರನ್ನೂ ಅಮಾನತು ಮಾಡಲಾಗಿದೆ.
ಕೋಮು ಗಲಭೆ ಪ್ರಕರಣದಲ್ಲಿ ಒಟ್ಟು ನಾಲ್ವರು ಅಧಿಕಾರಿಗಳ ತಲೆತಂಡವಾಗಿದೆ.