ಇಂದು ನಾಡಿನಾದ್ಯಂತ ನಾಗರ ಪಂಚಮಿ ಹಬ್ಬವನ್ನ ಆಚರಿಸಲಾಗುತ್ತಿದೆ. ಈ ಹಬ್ಬದ ದಿನ ಅನೇಕ ವಿಶೇಷ ಕೆಲಸಗಳನ್ನ ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬಗಳು ಬಹಳ ವಿಶೇಷವಾದ ಪ್ರಾಮುಖ್ಯತೆಯನ್ನ ಹೊಂದಿದೆ.
ಕ್ಯಾಲೆಂಡರ್ ಪ್ರಕಾರ, ನಾಗ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಆದರೆ ನಂಬಿಕೆಗಳ ಪ್ರಕಾರ ಹಬ್ಬದ ದಿನ ಕೆಲ ತಪ್ಪುಗಳನ್ನ ಮಾಡಬಾರದು ಎನ್ನಲಾಗುತ್ತದೆ. ಆ ತಪ್ಪುಗಳೇನು ಎಂಬುದು ಇಲ್ಲಿದೆ.
ನಾಗರ ಪಂಚಮಿಯ ದೇವತೆಗಳನ್ನು ಎಂಟು ದೇವರುಗಳೆಂದು ಪರಿಗಣಿಸಲಾಗಿದೆ. ಈ ದಿನ ಅನಂತ, ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ, ಕುಲೀರ, ಕಾರ್ಕತ್ ಮತ್ತು ಶಂಖ ಎಂಬ ಅಷ್ಟನಾಗರನ್ನು ಪೂಜಿಸಲಾಗುತ್ತದೆ. ನಾಗರ ಪಂಚಮಿಯ ಒಂದು ದಿನ ಉಪವಾಸ ಮಾಡಿ. ಬಳಿಕ ಸಂಜೆ ಊಟ, ತಿಂಡಿ ಮಾಡಬಹುದು.
ಕೆಲವರ ಮನೆಯಲ್ಲಿ ನಾಗ ಚಿತ್ರ ಅಥವಾ ಜೇಡಿಮಣ್ಣಿನಿಂದ ಮಾಡಿದ ಹಾವಿನ ವಿಗ್ರಹವನ್ನು ಪೂಜಿಸಲಾಗುತ್ತದೆ. ಇನ್ನು ಕೆಲವು ಮನೆಗಳಲ್ಲಿ ನಾಗನ ವಿಗ್ರಹಕ್ಕೆ ಹಾಲೆರೆದು, ಪ್ರಸಾದ ಇಟ್ಟು, ಅರಿಶಿನ, ರೋಲಿ (ಕೆಂಪು ಕುಂಕುಮ), ಅಕ್ಕಿ ಮತ್ತು ಹೂವುಗಳನ್ನು ಅರ್ಪಿಸುವ ಮೂಲಕ, ನಾಗ ದೇವರನ್ನು ಪೂಜಿಸಲಾಗುತ್ತದೆ. ಕೊನೆಯಲ್ಲಿ, ನಾಗರ ಪಂಚಮಿಯ ಕಥೆಯನ್ನು ಕೇಳಲೇಬೇಕು.
ನಾಗಪಂಚಮಿ ಹಬ್ಬವು ನಾಗ ದೇವರಿಗೆ ಸಮರ್ಪಿತವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ನಾಗ ಪಂಚಮಿಯ ದಿನದಂದು ಕಬ್ಬಿಣದ ಹರಿವಾಣಗಳನ್ನ ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು. ಕಬ್ಬಿಣದ ವಸ್ತುಗಳನ್ನ ರಾಹುವಿನ ಸಂಕೇತ ಎನ್ನಲಾಗುತ್ತದೆ. ಹಾಗೆಯೇ, ಇವುಗಳು ಸಾವಿನ ದೇಹಕ್ಕೆ ಸಂಬಂಧಿಸಿದೆ.
ಹಾಗಾಗಿ ಬೆಂಕಿಯನ್ನ ಕಬ್ಬಿಣವನ್ನ ಕಾಯಿಸಿದರೆ ಹಾವಿಗೆ ಸಮಸ್ಯೆ ಮಾಡಿದಂತೆ. ಈ ಕಾರಣದಿಂದ ನೀವು ಅನೇಕ ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ. ಹಾಗಾಗಿ ಈ ದಿನ ಚಪಾತಿ ಅಥವಾ ರೊಟ್ಟಿ ಮಾಡಬಾರದು, ಇದಕ್ಕೆ ಕಬ್ಬಿಣ ಬಳಸಬೇಕಾಗುತ್ತದೆ.
ನಾವು ಹಾವುಗಳನ್ನ ದೇವರ ರೂಪದಲ್ಲಿ ಪೂಜೆ ಮಾಡುತ್ತೇವೆ. ಹಾಗಾಗಿ ಎಂದಿಗೂ ಹಾವುಗಳಿಗೆ ಹಾನಿ ಮಾಡಬಾರದು. ಮುಖ್ಯವಾಗಿ ನಾಗರ ಪಂಚಮಿ ಹಬ್ಬದ ದಿನ ಹಾವಿಗೆ ಯಾವುದೇ ತೊಂದರೆಕೊಡಲು ಹೋಗಬೇಡಿ. ಇದರಿಂದ 7 ಜನ್ಮಗಳ ತನಕ ಸರ್ಪದೋಷ ಕಾಡುತ್ತದೆ.
ನಾಗ ಪಂಚಮಿಯ ಹಬ್ಬದ ದಿನದಂದು ಭೂ ತಾಯಿಗೆ ಯಾವುದೇ ರೀತಿ ತೊಂದರೆ ಕೊಡಬಾರದು. ಅಂದರೆ ಭೂಮಿಯನ್ನ ಅಗೆಯಬಾರದು. ಈ ರೀತಿ ಮಾಡಿದರೆ ಹಾವುಗಳಿಗೆ ಸಹ ಹಾನಿ ಮಾಡಿದ ಹಾಗೆ ಆಗುತ್ತದೆ. ಇದರಿಂದ ನಿಮ್ಮ ಕುಟುಂಬದಲ್ಲಿ ತೊಂದರೆಗಳಾಗುತ್ತದೆ.