ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಶಹರ ವಲಯದ ಉರ್ದು ಶಾಲೆಗಳ ಶಿಕ್ಷಕರಿಗೆ ನೀಡುವ ಉತ್ತಮ ಶಿಕ್ಷಕ-ಶಿಕ್ಷಕಿ ಪ್ರಶಸ್ತಿಗೆ ಸ್ಥಳೀಯ ಅಂಜುಮನ್ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ನಜ್ಮಾಬೇಗಂ ಸಿದ್ನೆಕೊಪ್ಪ ಭಾಜನರಾಗಿದ್ದಾರೆ.
ಈಚೆಗೆ ರಾಜೀವಗಾಂಧಿ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ.4ರಲ್ಲಿ ನಡೆದ ಗದಗ ಶಹರ ವಲಯದ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಅಭಿವೃದ್ಧಿ) ಜಿ.ಎಲ್. ಬಾರಾಟಕ್ಕೆ, ಡಯಟ್ ಹಿರಿಯ ಉಪನ್ಯಾಸಕಿ ಎಂ. ಎಂ. ಕರ್ಜಗಿ, ಗದಗ ಶಹರ ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಎ. ಫಾರುಖಿ, ಉಪನಿರ್ದೇಶಕರ ಕಚೇರಿ ಉರ್ದು ಇಸಿಒ ರಿಜ್ವಾನ್ ಕವಲಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಿಕ್ಷಣ ಸಂಯೋಜಕ ಐ.ಬಿ. ಮಡಿವಾಳರ, ಗದಗ ಶಹರ ಯುಆರ್‌ಸಿ ಶಿಕ್ಷಣ ಸಂಯೋಜಕ ಪಿ.ಡಿ. ಮಂಗಳೂರ, ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಎ. ಜಲಗೇರಿ ಸೇರಿ ಹಲವರಿದ್ದರು.