ಗದಗ:- ಬೆತ್ತಲೆಯಾಗಿ ಓಡಾಡಿ, ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಹಗ್ಗದಿಂದ ಕೈಕಾಲು ಕಟ್ಟಿ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗ ನಗರದ ಗಾಂಧಿ ಸರ್ಕಲ್ ಬಳಿ ಜರುಗಿದೆ.
Advertisement
ಮೇಲ್ನೋಟಕ್ಕೆ ಈತ ಮಾನಸಿಕ ಅಸ್ವಸ್ಥ ಯುವಕ ಎನ್ನಲಾಗಿದೆ. ಈತ ಗದಗ ನಗರದ ಗಾಂಧಿ ಸರ್ಕಲ್ ಬಳಿ
ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಬಳಿಕ ಗಾಂಧಿ ಸರ್ಕಲ್ ಜನ್ರಿಗೆ ಕಲ್ಲು ತೂರಿದ್ದಾನೆ. ಹೀಗಾಗಿ ಸಿಟ್ಟಿಗೆದ್ದ ಸಾರ್ವಜನಿಕರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಶಹರ ಪೊಲೀಸರು ದೌಡಾಯಿಸಿ, ಮಾನಸಿಕ ಅಸ್ವಸ್ಥನನ್ನು ಆ್ಯಂಬುಲೆನ್ ನಲ್ಲಿ ಆಸ್ಪತ್ರೆಗೆ ರವಾನಿಸಿದರು.
ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.