ಗದುಗಿನ ಸಿದ್ದಲಿಂಗೇಶ್ವರ ನಗರದ ಬಸವೇಶ್ವರ ಪ್ರೌಢಶಾಲೆಯಲ್ಲಿ ನಡೆದ ಗದಗ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ವಿಜಯ ಪ್ರಾಥಮಿಕ ಶಾಲೆಯ ೧ನೇ ತರಗತಿ ವಿದ್ಯಾರ್ಥಿ ನಮನ ಸೊಂಡೂರು ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. ಈತನಿಗೆ ಸಂಸ್ಥೆಯ ಅಧ್ಯಕ್ಷ ಅಶೋಕ ಅಕ್ಕಿ, ಕಾರ್ಯದರ್ಶಿ ಸಂತೋಷ ಅಕ್ಕಿ, ಮುಖ್ಯಸ್ಥರಾದ ಸಾಗರಿಕಾ ಅಕ್ಕಿ, ಮುಖ್ಯೋಪಾಧ್ಯಾಯೆ ರೇಷ್ಮಾ ಚೆನ್ನಪ್ಪಗೌಡ್ರು ಹಾಗೂ ಗುರುವೃಂದದವರು ಅಭಿನಂದಿಸಿದ್ದಾರೆ.
Advertisement