ಬೆಂಗಳೂರು: ಶ್ವೇತಾಗೌಡ ಎಂಬಾಕೆ ತಮ್ಮ ಹೆಸರು ಬಳಸಿಕೊಂಡು ಚಿನ್ನದ ಅಂಗಡಿ ಮಾಲೀಕರಿಗೆ ವಂಚನೆ ಎಸಗಿದ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪೊಲೀಸ್ ಕಮೀಷನರ್ಗೆ ಪತ್ರ ಬರೆದು ಸಮಗ್ರ ತನಿಖೆ ಮಾಡಿ ಶಿಕ್ಷೆ ನೀಡುವಂತೆ ಮನವಿ ಮಾಡುತ್ತೇನೆ.
Advertisement
ಸಿನಿಮಾದವರು ಏನೇನ್ ಮಾಡ್ತಾರೋ, ಇದೆಲ್ಲ ಬರೋದು ಸಿನಿಮಾದವರಿಗೆ ತಾನೆ. ಪೊಲೀಸ್ ಆಧಿಕಾರಿಗಳ ಬಳಿ ಮಾತನಾಡುತ್ತೇನೆ. ಐಶ್ವರ್ಯ ಅವರು ಒಂದು ಕಾರ್ಯಕ್ರಮಕ್ಕೆ ಕರೆದಿದ್ದರು, ಆ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ನಮ್ಮಣ್ಣ ಬೇಜಾರ್ ಮಾಡ್ಕೊಂಡ್ ಬಿಟ್ಟಾನಂತೆ, ನನಗೆ ಗೊತ್ತಿಲ್ಲದೆ ಯಾರು ಇನ್ನೊಬ್ಬ ತಂಗಿ ಎಂದು. ನಾನೇ ಪೊಲೀಸರಿಗೆ ಪತ್ರ ಬರೆಯುತ್ತೇನೆ ಎಂದು ಡಿ ಕೆ ಸುರೇಶ್ ಹೇಳಿದರು.