India Pakistan War: ಆಪರೇಷನ್ ಸಿಂದೂರ್ ದಾಳಿಯಲ್ಲಿ ಹತರಾದ ಉಗ್ರರ ಹೆಸರು ರಿವೀಲ್..!

0
Spread the love

ನವದೆಹಲಿ: ಮೇ 7ರಂದು ಭಾರತ ನಡೆಸಿದ ಆಪರೇಷನ್ ಸಿಂಧೂರ್ ದಾಳಿಯಲ್ಲಿ ಮೃತಪಟ್ಟ ಉಗ್ರರ ಹೆಸರನ್ನು ಭಾರತ ಬಹಿರಂಗಗೊಳಿಸಿದೆ. ಭಾರತದ ಸರ್ಕಾರದ ಮೂಲಗಳ ಪ್ರಕಾರ ಮೇ 7ರಂದು ಪಾಕಿಸ್ತಾನದಲ್ಲಿ ನಡೆದ ಆಪರೇಷನ್ ಸಿಂಧೂರ್ ದಾಳಿಯಲ್ಲಿ ಹತ್ಯೆಯಾದ ಐವರು ಭಯೋತ್ಪಾದಕರ ಹೀಗಿವೆ ನೋಡಿ..

Advertisement

ಮುದಾಸ್ಸರ್ ಖಾದಿಯನ್ ಖಾಸ್ @ ಮುಡಾಸ್ಸರ್ @ ಅಬು

ಈತ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಸದಸ್ಯನಾಗಿದ್ದು, ಮುರೀಡ್ಕೆಯಲ್ಲಿರುವ ಮರ್ಕಝ್ ತೊಯ್ಬಾದ ನೇತೃತ್ವ ವಹಿಸಿದ್ದ. ಈತನ ಅಂತಿಮ ಸಂಸ್ಕಾರದಲ್ಲಿ ಪಾಕಿಸ್ತಾನ ಸೇನೆಯಿಂದ ಗೌಡ್ ಆಫ್ ಹಾನರ್ ಗೌರವ ನೀಡಲಾಯಿತು. ಪಾಕಿಸ್ತಾನ ಸೇನಾ ಮುಖ್ಯಸ್ಥ ಮತ್ತು ಪಂಜಾಬ್ ಮುಖ್ಯಮಂತ್ರಿ (ಮರಿಯಂ ನವಾಜ್) ಶ್ರದ್ಧಾಂಜಲಿ ಅರ್ಪಿಸಿದ್ರು. ಈತನ ಅಂತಿಮ ಸಂಸ್ಕಾರವನ್ನು ಜಮಾತ್-ಉದ್-ದಾವಾ (JuD) ಸಂಘಟನೆಯ ಹಫೀಜ್ ಅಬ್ದುಲ್ ರಊಫ್ (ಜಾಗತಿಕ ಭಯೋತ್ಪಾದಕ) ಮಾಡಿದ್ದ. ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಮತ್ತು ಪಂಜಾಬ್ ಪೊಲೀಸ್ ಮಹಾನಿರ್ದೇಶಕರು ಕೂಡ ಈತನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ರು.

ಹಫೀಜ್ ಮುಹಮ್ಮದ್ ಜಮೀಲ್

ಈತ ಜೈಷ್-ಎ-ಮೊಹಮ್ಮದ್ (JeM) ಸಂಘಟನೆಯ ಉಗ್ರನಾಗಿದ್ದು, ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ಈತನ ಹಿರಿಯ ಮಾವನಾಗಿದ್ದಾನೆ. ಬಹಾವಲ್ಪುರ್‌ನಲ್ಲಿನ ಮಾರ್ಕಝ್ ಸುಭಾನ್ ಅಲ್ಲಾಹ್‌ ಅನ್ನು ಈತ ಮುನ್ನಡೆಸುತ್ತಿದ್ದ. ಯುವಕರನ್ನು ಉಗ್ರವಾದದ ದಿಕ್ಕಿನಲ್ಲಿ ಪ್ರೇರೇಪಿಸುವಲ್ಲಿ ಹಾಗೂ JeM ಗಾಗಿ ನಿಧಿ ಸಂಗ್ರಹಣೆಯಲ್ಲಿ ಈತ ಸಕ್ರಿಯ ಪಾತ್ರವಹಿಸಿದ್ದ.

ಮೊಹಮ್ಮದ್ ಯೂಸುಫ್ ಅಜರ್ @ ಉಸ್ತಾದ್ ಜೀ @ ಮೊಹಮ್ಮದ್ ಸಲೀಮ್ @ ಘೋಸಿ ಸಾಹೆಬ್

ಈತ ಕೂಡ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರನಾಗಿದ್ದು, ಮೌಲಾನಾ ಮಸೂದ್ ಅಜರ್ ಈತನಿಗೆ ಮಾವನಾಗಬೇಕು. ಈತ JeM ಉಗ್ರರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಉಗ್ರ ದಾಳಿಗಳಲ್ಲಿ ಭಾಗವಹಿಸಿದ್ದ ಈತ IC-814 ವಿಮಾನ ಅಪಹರಣ ಪ್ರಕರಣದಲ್ಲಿ ವಾಂಟೆಡ್ ಆಗಿದ್ದ.

ಖಾಲಿದ್ @ ಅಬು ಅಕಾಷಾ

ಈ ಉಗ್ರ ಲಷ್ಕರ್-ಎ-ತೊಯ್ಬಾದ ಸದಸ್ಯನಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಉಗ್ರ ದಾಳಿಗಳಲ್ಲಿ ಪಾಲ್ಗೊಂಡಿದ್ದ. ಆಫ್ಗಾನಿಸ್ತಾನದಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದ ಈತನ ಅಂತಿಮ ಸಂಸ್ಕಾರ ಫೈಸಲಾಬಾದ್‌ನಲ್ಲಿ ಜರುಗಿದ್ದು, ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳು ಮತ್ತು ಫೈಸಲಾಬಾದ್ ಉಪ ಆಯುಕ್ತರು ಭಾಗವಹಿಸಿದ್ದರು.

ಮೊಹಮ್ಮದ್ ಹಸನ್ ಖಾನ್

ಈತ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸದ್ಯನಾಗಿದ್ದ. ಮೌಫ್ತಿ ಅಸ್ಗರ್ ಖಾನ್ ಕಾಶ್ಮೀರಿಯ ಪುತ್ರನಾದ ಈತ ಪಾಕಿಸ್ತಾನ ಆಡಳಿತದ ಅಧೀನದಲ್ಲಿರುವ ಕಾಶ್ಮೀರದಲ್ಲಿ JeM ಯೋಧಿ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿಗಳನ್ನು ಸಂಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿದು ಬಂದಿದೆ.

 


Spread the love

LEAVE A REPLY

Please enter your comment!
Please enter your name here