ಉತ್ತಮ ಮಳೆ-ಬೆಳೆಯಿಂದ ಹಬ್ಬಕ್ಕೆ ಕಳೆ : ಡಾ. ಎಚ್.ಕೆ. ಪಾಟೀಲ

0
``Nammuru Dasara-2024'' Program of Gadag SSK Society
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಈ ಬಾರಿ ನಾಡಿನಲ್ಲಿ ಉತ್ತಮ ಮಳೆಯಿಂದಾಗಿ ಎಲ್ಲ ಜಲಾಶಯಗಳು ತುಂಬಿದ್ದು, ಜನತೆ ಸುಖ, ಶಾಂತಿ, ನೆಮ್ಮದಿಯೊಂದಿಗೆ ದಸರಾ ಹಬ್ಬವನ್ನು ಸಂತಸ-ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

Advertisement

ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರಬಾರ ವೇದಿಕೆಯಲ್ಲಿ ಜರುಗಿದ `ನಮ್ಮೂರು ದಸರಾ-2024′ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಕೆ ಸಮಾಜದ ಸಮಗ್ರ ಜನಗಣತಿ-2024ಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಅವರು ಜಗದಂಬಾ ದೇವಿ ಹಾಗೂ ತುಳಜಾಭವಾನಿ ದೇವಿಯ ದರ್ಶನ ಪಡೆದರು.

ಯುವ ಮುಖಂಡ ಕೃಷ್ಣಗೌಡ ಎಚ್.ಪಾಟೀಲ ಮಾತನಾಡಿ, ಪ್ರತಿ ವರ್ಷ ದಸರಾ ಹಬ್ಬವನ್ನು ಎಸ್.ಎಸ್.ಕೆ ಸಮಾಜ ಬಾಂಧವರು ಅತ್ಯಂತ ಅದ್ದೂರಿಯಾಗಿ ಗದಗ ನಗರದಲ್ಲಿ ಆಚರಿಸುತ್ತಾ ಬರುತ್ತಿದ್ದಾರೆ. ಒಳ್ಳೆಯ ಕೆಲಸಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಜೀವನವನ್ನು ಪಾವನಗೊಳಿಸುಂತೆ ದೇವಿಯಲ್ಲಿ ಪ್ರಾರ್ಥನೆ ಮಾಡುವ ಹಬ್ಬ ಇದಾಗಿದೆ. ಎಸ್.ಎಸ್.ಕೆ ಸಮಾಜವು ಈ ಹಿಂದೆ ನಮ್ಮ ಅಜ್ಜನವರಾದ ದಿ. ಕೆ.ಎಚ್. ಪಾಟೀಲ, ದೊಡ್ಡಪ್ಪನವರಾದ ಡಿ.ಆರ್. ಪಾಟೀಲ ಹಾಗೂ ತಂದೆಯವರಾದ ಡಾ. ಎಚ್.ಕೆ. ಪಾಟೀಲ ಅವರಿಗೆ ಪ್ರೋತ್ಸಾಹ ನೀಡಿದಂತೆ ನನಗೂ ಸಹ ಗೌರವಾದರಗಳೊಂದಿಗೆ ಪ್ರೋತ್ಸಾಹ ನೀಡುತ್ತಿರುವುದು ನಮ್ಮ ಕುಟುಂಬಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಎಸ್.ಎಸ್.ಕೆ ಸಮಾಜ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಬಾಂಡಗೆ ವಹಿಸಿದ್ದರು. ಎಸ್.ಎಸ್.ಕೆ ಸಮಾಜದ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಪಂಚ ಕಮಿಟಿಯ ಉಪಾಧ್ಯಕ್ಷ ರಾಜು ಬದಿ, ರವಿ ಶಿದ್ಲಿಂಗ, ದಸರಾ ಕಮಿಟಿಯ ಚೇರಮನ್ ವಿಷ್ಣುಸಾ ಶಿದ್ಲಿಂಗ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಂಚ ಕಮಿಟಿಯ ಸದಸ್ಯರಾದ, ವಿಶ್ವನಾಥಸಾ ಖಟವಟೆ, ಸುರೇಶಕುಮಾರ ಬದಿ, ಬಲರಾಮ ಬಸವಾ, ಮಾರುತಿ ಪವಾರ, ಶ್ರೀನಿವಾಸ ಬಾಂಡಗೆ, ಪರಶುರಾಮಸಾ ಬದಿ, ಗಣಪತಸಾ ಜಿತೂರಿ, ವಿನೋದ ಬಾಂಡಗೆ, ಪ್ರಕಾಶ ಬಾಕಳೆ, ಗಂಗಾಧರ ಹಬೀಬ, ಅನಿಲ್ ಖಟವಟೆ, ಅಂಬಾಸಾ ಖಟವಟೆ, ಸಮಾಜದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ವಿಶ್ವನಾಥ ಸೂಳಂಕಿ, ಸಾಗರ ಪವಾರ, ಸತೀಶ ದೇವಳೆ, ಶ್ರೀಕಾಂತ ಬಾಕಳೆ, ಮೋಹನಸಾ ಪವಾರ, ನಾಗರಾಜ ಖೋಡೆ, ಮಾಧು ಬದಿ, ಉಮಾ

ಬಾಯಿ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಎನ್.ಆರ್.ಖಟವಟೆ ಸ್ವಾಗತಿಸಿದರು. ಜಿ.ಎನ್. ಹಬೀಬ ನಿರೂಪಿಸಿದರು. ಮೋತಿಲಾಲಸಾ ಪೂಜಾರಿ ವಂದಿಸಿದರು.

ಉತ್ತಮ ಮಳೆಯಿಂದಾಗಿ ರೈತರ ಬೆಳೆ ಚೆನ್ನಾಗಿದೆ. ಈ ಬಾರಿ ಅತ್ಯಂತ ಕ್ಷೇಮವಾದ ವರ್ಷವಾಗಿರುವದರಿಂದ ಎಲ್ಲರ ಬದಕು ಹಸನಾಗಿದೆ. ಇದೇ ರೀತಿ ತಾಯಿ ಜಗದಂಬಾ ದೇವಿ ಎಲ್ಲರಿಗೂ ಸುಖ-ಶಾಂತಿ ನೀಡಲಿ ಎಂದು ಎಸ್.ಎಸ್.ಕೆ. ಸಮಾಜ ಬಾಂಧವರಿಗೆ ಸಚಿವ ಎಚ್.ಕೆ. ಪಾಟೀಲ ಶುಭ ಹಾರೈಸಿದರು.


Spread the love

LEAVE A REPLY

Please enter your comment!
Please enter your name here