ವಿಜಯಸಾಕ್ಷಿ ಸುದ್ದಿ, ಗದಗ : ಎಸ್‌ಎಸ್‌ಕೆ ಸಮಾಜದ ವತಿಯಿಂದ ಜಗದಂಬಾ ಶಿಕ್ಷಣ ಸಂಸ್ಥೆಯ ಮೂಲಕ ಈಗಾಗಲೇ ಎಲ್‌ಕೆಜಿಯಿಂದ ಎಸ್‌ಎಸ್‌ಎಲ್‌ಸಿವರೆಗೆ ಶಿಕ್ಷಣ ನೀಡಲಾಗುತ್ತಿದ್ದು, ಮುಂದಿನ ದಿನಮಾನಗಳಲ್ಲಿ ಪದವಿಪೂರ್ವ ಕಾಲೇಜುಗಳನ್ನು ತೆರೆದು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಮಾಜದ ಹಿರಿಯರು ಹಾಗೂ ನಗರದ ಗಣ್ಯ ಉದ್ಯಮಿಗಳಾದ ಆರ್.ಕೆ. ಹಬೀಬ (ಬುಡ್ಡಣ್ಣ) ಅವರು ಅಭಿಪ್ರಾಯಪಟ್ಟರು.
ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರಬಾರ ವೇದಿಕೆಯಲ್ಲಿ ಜರುಗಿದ `ನಮ್ಮೂರು ದಸರಾ-2024′ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇದಕ್ಕೂ ಮುನ್ನ ಅವರು ಶ್ರೀ ಜಗದಂಬಾ ದೇವಿ ಹಾಗೂ ಶ್ರೀ ತುಳಜಾಭವಾನಿ ದೇವಿಯ ದರ್ಶನ ಪಡೆದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ ಶಂಕರಸಾ ಪವಾರ ಮಾತನಾಡಿ, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಸಮಾಜದ ಏಳ್ಗೆಗಾಗಿ ನನ್ನ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.
ಬಲರಾಮ ಬಸವಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚ ಕಮಿಟಿಯ ಸದಸ್ಯರಾದ ವಿಶ್ವನಾಥಸಾ ಖಟವಟೆ, ಸುರೇಶಕುಮಾರ ಬದಿ, ಮಾರುತಿ ಪವಾರ, ಮೋತಿಲಾಲಸಾ ಪೂಜಾರಿ, ಪರಶುರಾಮಸಾ ಬದಿ, ಪ್ರಕಾಶ ಬಾಕಳೆ, ಅಂಬಾಸಾ ಖಟವಟೆ, ಮೋಹನಸಾ ಪವಾರ, ವಿಶ್ವನಾಥಸಾ ಸೂಳಂಕಿ, ಸಾಗರ ಪವಾರ, ಸತೀಶ ದೇವಳೆ, ಶ್ರೀಕಾಂತ ಬಾಕಳೆ, ರಾಘವೇಂದ್ರ ಬಾಂಡಗೆ, ನಾಗರಾಜ ಖೋಡೆ, ಉಮಾಬಾಯಿ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಜಿ.ಎನ್. ಹಬೀಬ ಕಾರ್ಯಕ್ರಮ ನಿರೂಪಿಸಿದರು. ಸುಧೀರ ಕಾಟೀಗರ ವಂದಿಸಿದರು. ಇದಕ್ಕೂ ಮುನ್ನ ಖ್ಯಾತ ಉದ್ಯಮಿ, ಬಡವರ ಬಂಧು ರತನ್ ಟಾಟಾ ಅವರ ನಿಧನಕ್ಕೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಎಸ್.ಎಸ್.ಕೆ ಸಮಾಜ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಬಾಂಡಗೆ ವಹಿಸಿದ್ದರು. ವೇದಿಕೆ ಮೇಲೆ ಪಂಚ ಕಮಿಟಿಯ ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ, ರವಿ ಶಿದ್ಲಿಂಗ, ದಸರಾ ಕಮಿಟಿಯ ಚೇರಮನ್ ವಿಷ್ಣುಸಾ ಶಿದ್ಲಿಂಗ ಹಾಗೂ ಉದ್ಯಮಿ ವಿರೇಶ ಅಂಗಡಿ ಉಪಸ್ಥಿತರಿದ್ದರು.