ರಕ್ಷಕ್ ಬುಲೆಟ್ ಕೊಟ್ಟ ಸರ್ ಪ್ರೈಸ್ ನೋಡಿ ಕಣ್ಣೀರಿಟ್ಟ ನಮ್ರತಾ ಗೌಡ

0
Spread the love

ʻಬಿಗ್‌ ಬಾಸ್‌ ಕನ್ನಡ ಸೀಸನ್‌ 10ರʼ ಸ್ಪರ್ಧಿಗಳಾಗಿದ್ದ ನಮ್ರತಾ ಗೌಡ ಮತ್ತು ರಕ್ಷಕ್‌ ಬುಲೆಟ್‌ ಬಿಗ್‌ ಬಾಸ್‌ ಮನೆಯಲ್ಲಿ ಆತ್ಮಿಯರಾಗಿದ್ದರು. ಇವರಿಬ್ಬರು ಅಕ್ಕ – ತಮ್ಮನಂತಿದ್ದರು. ʻಬಿಗ್‌ ಬಾಸ್‌ʼನಿಂದ ಹೊರ ಬಂದ ನಂತರವೂ ಇವರಿಬ್ಬರ ಅಕ್ಕ – ತಮ್ಮ ಬಾಂಧವ್ಯ ಮುಂದುವರೆದಿದೆ. ಸದ್ಯ ರಕ್ಷಕ್‌ ತನ್ನ ನೆಚ್ಚಿನ ಅಕ್ಕ ನಮ್ರತಾ ಗೌಡ ಅವರ ಹುಟ್ಟುಹಬ್ಬವನ್ನು ಗ್ರ್ಯಾಂಡ್‌ ಆಗಿ ಆಚರಿಸಿ ನಮ್ರತಾಗೆ ಸರ್ಪ್ರೈಸ್‌ ನೀಡಿದ್ದಾರೆ. ಇದನ್ನು ನೋಡಿ ನಮ್ರತಾ ಗೌಡ ಕಣ್ಣೀರು ಹಾಕಿದ್ದಾರೆ.

Advertisement

ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ಮತ್ತು ನಟಿ ನಮ್ರತಾ ಗೌಡ ಇತ್ತೀಚೆಗೆ ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಮ್ರತಾ ಗೌಡ ಹುಟ್ಟುಹ್ಬಕ್ಕೆ ಆಪ್ತರು, ಫ್ರೆಂಡ್ಸ್‌, ನೆಟ್ಟಿಗರು ಸೇರಿದಂತೆ ಹಲವರು ಸೋಶಿಯಲ್‌ ಮೀಡಿಯಾದಲ್ಲಿ ಶುಭ ಕೋರಿದ್ದಾರೆ. ನಮೃತಾ ಗೌಡ ಅವರ ಹುಟ್ಟುಹಬ್ಬವನ್ನು ರಕ್ಷಕ್‌ ಬುಲೆಟ್‌ ಅದ್ದೂರಿಯಾಗಿ ಸೆಲೆಬ್ರೇಟ್‌ ಮಾಡಿ ಸಪ್ರೈಸ್‌ ನೀಡಿದ್ದಾರೆ. ತಮ್ಮನ ಈ ಸರ್ಪ್ರೈಸ್‌ಗೆ ನಮ್ರತಾ ಕರಗಿ ಕಣ್ಣೀರಾಗಿದ್ದಾರೆ.

ನಮ್ರತಾ ಅವರ ಹುಟ್ಟುಹಬ್ಬವನ್ನು ಆಚರಿಸಿರುವ ವಿಡಿಯೋವನ್ನು ರಕ್ಷಕ್‌ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸಖತ್‌ ವೈರಲ್‌ ಆಗಿದೆ. ಈ ವಿಡಿಯೋಗೆ, “ಹುಟ್ಟುಹಬ್ಬದ ಶುಭಾಶಯಗಳು ಪಾಪು ನಿಮ್ಮೊಂದಿಗೆ ಎಂದೆಂದಿಗೂ” ಎಂಬ ಕ್ಯಾಪ್ಶನ್‌ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here