ನ. 9ರಿಂದ 17ರವರೆಗೆ ನರೇಗಲ್ಲ ಹಿರೇಮಠದ ಜಾತ್ರಾ ಮಹೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನವೆಂಬರ್ 16ರಂದು ಕಾಶಿ ಜಂಗಮವಾಡಿ ಮಠದ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ನರೇಗಲ್ಲ ಹಿರೇಮಠದ ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿದ್ದಾರೆ ಎಂದು ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶ್ರೀಗಳು ತಿಳಿಸಿದರು.

Advertisement

ನ. 9ರಿಂದ 17ರವರೆಗೆ ನಡೆಯುವ ಜಾತ್ರಾಮಹೋತ್ಸವದ ವಿವರಗಳನ್ನು ನೀಡಲು ಶ್ರೀಮಠದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನ. 9ರಂದು ಸಂಜೆ 6ಕ್ಕೆ ಪುರಾಣ ಪ್ರವಚನಗಳ ಉದ್ಘಾಟನೆ ನಡೆಯಲಿದ್ದು, ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಉದ್ಘಾಟಿಸಲಿದ್ದಾರೆ. ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಚೇರ್‌ಮನ್ ಮುತ್ತಪ್ಪ ನೂಲ್ಕಿ, ಪ.ಪಂ ಪುರುಷ ಸದಸ್ಯರು, ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬಸವನಕೊಪ್ಪದ ಗದಿಗಯ್ಯ ಗವಾಯಿಗಳು ಮತ್ತು ತಂಡ ಸಂಗೀತ ಸೇವೆ ನೀಡಲಿದ್ದಾರೆ.

ನ. 10ರಂದು ಧುರೀಣ ರವಿ ದಂಡಿನ, ಬಿಜೆಪಿ ಮುಖಂಡ ಉಮೇಶ್ ಪಾಟೀಲ, ನಿ.ಶಿ. ಬಸವನಗೌಡ ಮಲ್ಲನಗೌಡ್ರ, ಕಳಕನಗೌಡ ಪಾಟೀಲ, ರಾಜು ಮಣ್ಣೊಡ್ಡರ, ಡಾ. ಎಲ್.ಎನ್. ಗ್ರಾಮಪುರೋಹಿತ, ನಾರಾಯಣ ವಡ್ಡಟ್ಟಿ, ಡಾ. ಕೃಷ್ಣ ಕಾಳೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ನ. 11ರಂದು ಗುರುಪಾದಪ್ಪ ಬೆಲ್ಲದ, ಶಿವಯೋಗಿ ಜಕ್ಕಲಿ, ಮುತ್ತಣ್ಣ ಪಲ್ಲೇದ, ಬಾಳಪ್ಪ ಸೋಮಗೊಂಡ, ಶಶಿಧರ ಓದುಸುಮಠ, ರಮೇಶ ಬೆಂಡಿಕಾಯಿ, ಸೋಮಣ್ಣ ಲಕ್ಕನಗೌಡ್ರ, ಬಸಪ್ಪ ಮಡಿವಾಳರ ಅತಿಥಿಗಳಾಗಿ ಆಗಮಿಸಲಿದ್ದಾರೆ.

ನ. 12ರಂದು ಶ್ರೀ ವೀರಭದ್ರೇಶ್ವರ-ಭದ್ರಕಾಳಿ ವಿವಾಹ ಮಹೋತ್ಸವವು ಜರುಗಲಿದ್ದು, ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಸಾನ್ನಿಧ್ಯ, ಮುಖಂಡ ಸಿದ್ದಣ್ಣ ಬಂಡಿ, ಸಂದೇಶ ದೊಡ್ಡಮೇಟಿ, ಅತಿಥಿಗಳಾಗಿ ಪಾಲ್ಗೊಳ್ಳುವರು. ಶಶಿಧರ ಹೊಟ್ಟಿನ, ಶರಣಪ್ಪ ನಾಶಿಪುಡಿಯವರನ್ನು ಸನ್ಮಾನಿಸಲಾಗುವುದು.

ನ. 13ರಂದು ಮುಖಂಡ ಅಕ್ಷಯ ಪಾಟೀಲ, ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಫಕ್ರುಸಾಬ ರೇವಡಿಗಾರ, ಮೈಲಾರಪ್ಪ ಚಳ್ಳಮರದ, ಅಲ್ಲಾಭಕ್ಷಿ ನದಾಫ್, ಶೇಖಪ್ಪ ಕೆಂಗಾರ, ಖಾದರಬಾಷಾ ಹೂಲಗೇರಿ ಅತಿಥಿಗಳಾಗಿ ಆಗಮಿಸಲಿದ್ದಾರೆ.

ನ. 14ರಂದು ಅನ್ನಪೂರ್ಣೇಶ್ವರಿ ಮಹಿಳಾ ಮಂಡಳದ ವಾರ್ಷಿಕೋತ್ಸವ ಜರುಗಲಿದ್ದು, ಅಧ್ಯಕ್ಷೆ ಕಸ್ತೂರಿಬಾಯಿ ಧನ್ನೂರ ಅಧ್ಯಕ್ಷತೆ ವಹಿಸುವರು. ಸಂಯುಕ್ತಾ ಬಂಡಿ, ಮಂಜುಳಾ ರೇವಡಿ, ಪಿಎಸ್‌ಐ ಐಶ್ವರ್ಯ ನಾಗರಾಳ, ನರೇಗಲ್ಲ ಪ.ಪಂ ಮಹಿಳಾ ಸದಸ್ಯೆಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜಾತ್ರಾ ಕಾರ್ಯಕ್ರಮದ 9 ದಿನಗಳೂ ಅನ್ನಪೂರ್ಣೇಶ್ವರಿ ದೇವಿಗೆ ಕುಂಕುಮಾರ್ಚನೆ, ಮುತ್ತೆಮಲ್ಲೆ ದೆಯರಿಗೆ ಉಡಿ ತುಂಬುವ ಕಾರ್ಯಕ್ರಮಗಳು ನಡೆಯಲಿವೆ.

ನ. 15ರಂದು ಮುತ್ತಣ್ಣ ಕಡಗದ, ಶಶಿಧರ ಸಂಕನಗೌಡ್ರ, ಉಮೇಶ್ ಸಂಗನಾಳಮಠ, ನಿಂಗಪ್ಪ ಕಣವಿ, ಕಲ್ಮೇಶತ ತೊಂಡಿಹಾಳ ಅತಿಥಿಗಳಾಗಿ ಆಗಮಿಸಲಿದ್ದು, ಶಿವಯ್ಯ ಮಾಲಗಿತ್ತಿಮಠ ತಂಡದವರಿಂದ ಸಂಗೀತ ಸೇವೆ ಜರುಗಲಿದೆ.

ನ. 17ರಂದು ಬೆಳಿಗ್ಗೆ 6ಕ್ಕೆ ಅಯ್ಯಾಚಾರ, ಇಷ್ಟಲಿಂಗ ದೀಕ್ಷೆ ಜರುಗಲಿದ್ದು, ಶ್ರೀ ಮಳೆ ಮಲ್ಲೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಲಿದೆ. 9ಕ್ಕೆ ಗುರುಗಳ ಭಾವಚಿತ್ರ ಹಾಗೂ ಧರ್ಮ ಗ್ರಂಥಗಳ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದು ಅನ್ನ ಸಂತರ್ಪಣೆಯೊಡಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಶ್ರೀಗಳು ತಿಳಿಸಿದರು.

ನ. 16ರಂದು ನಡೆಯುವ ಪುರಾಣ ಮಂಗಲ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಾಶಿ ಜಗದ್ಗುರುಗಳು ವಹಿಸಲಿದ್ದು, ಷ.ಬ್ರ. ಶ್ರೀ ವೀರಭದ್ರ ಶಿವಾಚಾರ್ಯರು ಸಿದ್ದರಬೆಟ್ಟ-ಅಬ್ಬಿಗೇರಿ ನೇತೃತ್ವ ವಹಿಸಲಿದ್ದಾರೆ. ಶಾಸಕ ಜಿ.ಎಸ್. ಪಾಟೀಲ, ಡಾ. ಕೆ.ಬಿ. ಧನ್ನೂರ, ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ಶೇಖರಪ್ಪ ಮುತ್ತೇನವರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಬಿ.ವಿ. ಶಿರೂರ ಬರೆದಿರುವ ಪಂ. ಕಾಶಿನಾಥಶಾಸ್ತಿಗಳು ಗಚ್ಚಿನಮಠ’ ಹಾಗೂ ಕಾಶಿನಾಥ ಸಾಲಿಮಠ ಬರೆದಿರುವ ಕಾಶಿ ದರ್ಶನ’ ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ.


Spread the love

LEAVE A REPLY

Please enter your comment!
Please enter your name here